ಶ್ರೀಲಂಕಾ ಸರಣಿಯಿಂದ ರೋಹಿತ್ ಶರ್ಮಾ ಔಟ್

ಮಂಗಳವಾರ, 24 ಡಿಸೆಂಬರ್ 2019 (08:53 IST)
ಮುಂಬೈ: ಸತತ ಕ್ರಿಕೆಟ್ ನಿಂದ ಬಳಲಿರುವ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾಗೆ ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

 

ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು, ರೋಹಿತ್ ಶರ್ಮಾಗೆ ಲಂಕಾ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಆದರೆ ಆಸೀಸ್ ಸರಣಿಗೆ ರೋಹಿತ್ ಆಯ್ಕೆಯಾಗಿದ್ದಾರೆ. ಇನ್ನು ಗಾಯದಿಂದಾಗಿ ಹಲವು ದಿನಗಳಿಂದ ಕ್ರಿಕೆಟ್ ನಿಂದ ಹೊರಗುಳಿದಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಕೂಡಾ ತಂಡಕ್ಕೆ ವಾಪಸ್ ಆಗಿದ್ದಾರೆ.

ಜನವರಿ 5 ಸರಣಿ ಆರಂಭವಾಗಲಿದ್ದು, ಭಾರತ ಮೂರು ಟಿ20 ಪಂದ್ಯವಾಡಲಿದೆ. ಆದರೆ ಈ ಸರಣಿಯ ಬಳಿಕ ಭಾರತ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಏಕದಿನ ಸರಣಿ ಆಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ