ಇದ್ದಕ್ಕಿದ್ದಂತೆ ರೋಹಿತ್ ಶರ್ಮಾ ಗಡ್ಡ ಬೋಳಿಸಿಕೊಂಡಿದ್ದು ಇದೇ ಕಾರಣಕ್ಕೆ!

ಬುಧವಾರ, 11 ಡಿಸೆಂಬರ್ 2019 (09:23 IST)
ಮುಂಬೈ: ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಇದುವರೆಗೆ ಸಣ್ಣದಾಗಿ ಗಡ್ಡ ಬೆಳೆಸಿಕೊಂಡಿದ್ದರು. ವಿರಾಟ್ ಕೊಹ್ಲಿಯಷ್ಟು ಅಲ್ಲದೇ ಇದ್ದರೂ ರೋಹಿತ್ ಕೂಡಾ ಗಡ್ಡದಾರಿಯಾಗಿದ್ದರು.


ಆದರೆ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಟಿ20 ಆಡುವ ಮೊದಲು ರೋಹಿತ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ಇದಕ್ಕೆ ನಿಜ ಕಾರಣವನ್ನೂ ಅವರೇ ಬಿಚ್ಚಿಟ್ಟಿದ್ದಾರೆ. ಯಜುವೇಂದ್ರ ಚಾಹಲ್ ನಡೆಸಿಕೊಡುವ ಚಾಹಲ್ ಟಿವಿ ಕಾರ್ಯಕ್ರಮದಲ್ಲಿ ರೋಹಿತ್ ತಾವು ಗಡ್ಡ ಬೋಳಿಸಿದ್ದೇಕೆ ಎಂದು ಬಹಿರಂಗಪಡಿಸಿದ್ದಾರೆ.

‘ನನ್ನ ಮಗಳಿಗಾಗಿ ಕ್ಲೀನ್ ಶೇವ್ ಮಾಡಿಕೊಂಡೆ. ನನ್ನ ಗಡ್ಡ ಅವಳಿಗೆ ಇಷ್ಟವಿಲ್ಲ. ಗಡ್ಡವಿದ್ದರೆ ಅವಳು ನನ್ನ ಜತೆ ಆಡಲ್ಲ’ ಎಂದು ರೋಹಿತ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ