ಫಿಟ್ನೆಸ್ ಪಾಸಾಗದೇ ರೋಹಿತ್ ಶರ್ಮಾಗೆ ಟೀಂ ಇಂಡಿಯಾಗೆ ನೋ ಎಂಟ್ರಿ

ಸೋಮವಾರ, 9 ನವೆಂಬರ್ 2020 (10:43 IST)
ಮುಂಬೈ: ಗಾಯವಿದ್ದರೂ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುತ್ತಿರುವ ರೋಹಿತ್ ಶರ್ಮಾಗೆ ಈಗ ಟೀಂ ಇಂಡಿಯಾ ಎಂಟ್ರಿ ಸುಲಭವಲ್ಲ.


ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದ ತಂಡದಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದಿಲ್ಲ. ಆದರೆ ಮುಂದೆ ಸ್ಥಾನ ಪಡೆಯಬೇಕೆಂದರೆ ರೋಹಿತ್ ಫಿಟ್ನೆಸ್ ಪರೀಕ್ಷೆ ಪಾಸಾಗಲೇ ಬೇಕು. ಟೀಂ ಇಂಡಿಯಾ ಫಿಸಿಯೋ ನಿತಿನ್ ಪಟೇಲ್ ನಡೆಸುವ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗದೇ ರೋಹಿತ್ ಆಸ್ಟ್ರೇಲಿಯಾ ಪ್ರವಾಸ ಮಾಡಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಏಕದಿನ ಸರಣಿಗೆ ಇಲ್ಲದೇ ಇದ್ದರೂ ಟೆಸ್ಟ್ ಸರಣಿ ವೇಳೆಗಾದರೂ ತಂಡಕ್ಕೆ ವಾಪಸಾಗಲು ರೋಹಿತ್ ಚಿಂತನೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ