ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಅಭಿಮಾನಿಗೆ ಸರ್ಪೈಸ್ ಕೊಟ್ಟ ರೋಹಿತ್ ಶರ್ಮಾ

ಶುಕ್ರವಾರ, 24 ಸೆಪ್ಟಂಬರ್ 2021 (09:14 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಅಭಿಮಾನಿಯೊಬ್ಬರಿಗೆ ಕ್ರಿಕೆಟಿಗ ರೋಹಿತ್ ಶರ್ಮಾ ಸರ್ಪೈಸ್ ಕೊಟ್ಟಿದ್ದಾರೆ.


ಹಾಟ್ ಸೀಟ್ ನಲ್ಲಿ ಕೂತಿದ್ದ ಪ್ರಾಂಶು ಎಂಬವರು ತಾನು ರೋಹಿತ್ ಶರ್ಮಾರ ದೊಡ್ಡ ಅಭಿಮಾನಿ. ಅವರ ಫೋಟೋ ಯಾವತ್ತೂ ನನ್ನ ಪರ್ಸ್ ನಲ್ಲಿರುತ್ತದೆ ಎಂದು ಬಿಗ್ ಬಿ ಬಳಿ ಹೇಳಿಕೊಂಡಿದ್ದರು.

ಕೊನೆಗೆ ಅಮಿತಾಭ್ ಅಭಿಮಾನಿಗೆ ಸರ್ಪೈಸ್ ನೀಡಿದ್ದು, ರೋಹಿತ್ ಶರ್ಮಾಗೆ ನೇರವಾಗಿ ವಿಡಿಯೋ ಕರೆ ಮಾಡಿದ್ದಾರೆ. ರೋಹಿತ್ ರನ್ನು ಸ್ಕ್ರೀನ್ ನಲ್ಲಿ ನೋಡಿದ ಅಭಿಮಾನಿ ಖುಷಿಯಿಂದ ಎದ್ದು ನಿಂತು ಸೆಲ್ಯೂಟ್ ಮಾಡಿದ್ದಾರೆ. ಅಭಿಮಾನಿ ಜೊತೆಗೆ ಮಾತನಾಡಿದ ರೋಹಿತ್ ಕನಸು ನನಸು ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ