ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ ಬೆನ್ನಲ್ಲೇ ಮುರಿದ ಧೋನಿ

ಶುಕ್ರವಾರ, 28 ಜೂನ್ 2019 (09:40 IST)
ಲಂಡನ್: ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಧೋನಿಯ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.


ರೋಹಿತ್ ನಿನ್ನೆ ಕೇವಲ 18 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಇದಕ್ಕೂ ಮೊದಲು ಅವರು ತಲಾ ಒಂದು ಬೌಂಡರಿ ಒಂದು ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಏಕದಿನ ಪಂದ್ಯಗಳಲ್ಲಿ ಅವರ ಸಿಕ್ಸರ್ ಗಳ ಸಂಖ್ಯೆ 225 ಕ್ಕೆ ತಲುಪಿದೆ. ಈ ಮೂಲಕ ಧೋನಿ ಜತೆಗೆ ಜಂಟಿಯಾಗಿ ಸ್ಥಾನ ಹಂಚಿಕೊಂಡರು. ಆದರೆ ರೋಹಿತ್ ತಮ್ಮ ದಾಖಲೆ ಸರಿಗಟ್ಟಿದ ಬೆನ್ನಲ್ಲೇ ಧೋನಿ ಅದನ್ನು ಮುರಿದಿದ್ದಾರೆ.

ನಂತರ ಕ್ರೀಸ್ ಗೆ ಬಂದ ಧೋನಿ 2 ಸಿಕ್ಸರ್ ದಾಖಲಿಸುವ ಮೂಲಕ ರೋಹಿತ್ ರಿಂದ ಮುನ್ನಡೆ ಪಡೆದಿದ್ದು, ಸಿಕ್ಸರ್ ಗಳ ಸಂಖ್ಯೆಯನ್ನು 227 ಕ್ಕೆ ಏರಿಸಿದ್ದಾರೆ. ಇನ್ನೊಂದೆಡೆ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವೇಗದ 20 ಸಾವಿರ ರನ್ ಗಳಿಸಿ ಸಚಿನ್ ತೆಂಡುಲ್ಕರ್,  ಬ್ರಿಯಾನ್ ಲಾರಾ ದಾಖಲೆಗಳನ್ನು ಮುರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ