ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಏಕದಿನ ಪಂದ್ಯದ ಟಾಪ್ ಬ್ಯಾಟ್ಸ್ ಮನ್ ಗಳು

ಗುರುವಾರ, 5 ನವೆಂಬರ್ 2020 (09:25 IST)
ದುಬೈ: ಐಸಿಸಿ ಏಕದಿನ ಶ್ರೇಯಾಂಕ ಬಿಡುಗಡೆಯಾಗಿದ್ದು ಅಗ್ರ ಸ್ಥಾನದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮುಂದುವರಿದಿದ್ದಾರೆ.


ಕಳೆದ ಕೆಲವಾರು ತಿಂಗಳಿನಿಂದ ಏಕದಿನ ಕ್ರಿಕೆಟ್ ಆಡದೇ ಇಬ್ಬರೂ ಕ್ರಿಕೆಟಿಗರು ತಮ್ಮ ಟಾಪ್ ಸ್ಥಾನವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಸದ್ಯದಲ್ಲೇ ಭಾರತ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆಡಲಿದ್ದು, ಈ ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ತಮ್ಮ ಅಗ್ರಸ್ಥಾನವನ್ನು ಭದ್ರಪಡಿಸಲು ಅವಕಾಶವಿದೆ. ಇನ್ನು, ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಂಡರೆ ಅವರೂ ಹಲವು ತಿಂಗಳುಗಳ ಬಳಿಕ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದಂತಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ