ಆರೋಗ್ಯ ಕಾರ್ಯಕರ್ತರಿಗಾಗಿ ವರ್ಕೌಟ್ ಮಾಡಿದ ರೋಹಿತ್ ಶರ್ಮಾ

ಶನಿವಾರ, 30 ಮೇ 2020 (09:11 IST)
ಮುಂಬೈ: ಕೊರೋನಾ ವಿರುದ್ಧ ತಮ್ಮ ಜೀವ ಪಣಕ್ಕಿಟ್ಟು ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರಿಗಾಗಿ ಕ್ರಿಕೆಟಿಗ ರೋಹಿತ್ ಶರ್ಮಾ ವರ್ಕೌಟ್ ಚಾಲೆಂಜ್ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.


ತಮ್ಮ ದೈನಂದಿನ ವರ್ಕೌಟ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ರೋಹಿತ್ ಶರ್ಮಾ ಈ ವರ್ಕೌಟ್ ವಿಡಿಯೋ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಅರ್ಪಣೆ ಎಂದಿದ್ದಾರೆ.

ಅಷ್ಟೇ ಅಲ್ಲದೆ, ಈ ಸಾಮಾಜಿಕ ಜಾಲತಾಣದ ಅಭಿಯಾನದಲ್ಲಿ ಪಾಲ್ಗೊಳ್ಳಲು ತಮ್ಮ ಮಿತ್ರರಿಗೂ ಕರೆ ನೀಡಿದ್ದಾರೆ. ಆರೋಗ್ಯ ಕಾರ್ಯಕರ್ತರನ್ನು ಗೌರವಿಸಿ ಅನೇಕ ಸಾಮಾಜಿಕ ಜಾಲತಾಣ ಅಭಿಯಾನಗಳು ನಡೆದಿವೆ. ಅದಕ್ಕೆ ಹೊಸ ಸೇರ್ಪಡೆ ಈ ಚಾಲೆಂಜ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ