ರೋಹಿತ್ ಶರ್ಮಾಗೆ ಗಂಭೀರ ಗಾಯ

ಗುರುವಾರ, 3 ನವೆಂಬರ್ 2016 (08:45 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯ ಆಡುವಾಗ ಗಾಯಗೊಂಡಿದ್ದ ರೋಹಿತ್ ಶರ್ಮಾಗೆ ಈಗ ಸುದೀರ್ಘ ವಿಶ್ರಾಂತಿಯ ಅಗತ್ಯವಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ತಿಳಿಸಿದ್ದಾರೆ.

ರೋಹಿತ್ ತೊಡೆ ಗಾಯಕ್ಕೊಳಗಾಗಿದ್ದು, 6 ರಿಂದ 8 ವಾರ ವಿಶ್ರಾಂತಿಯ ಅಗತ್ಯವಿದೆ. ಇಂಗ್ಲೆಂಡ್ ನ ತಜ್ಞ ವೈದ್ಯರು ಅವರನ್ನು ಪರೀಕ್ಷಿಸಲಿದ್ದು, ಅಗತ್ಯ ಬಂದರೆ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾದೀತು ಎಂದು ಪ್ರಸಾದ್ ಹೇಳಿದ್ದಾರೆ.

ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಅವರನ್ನು ಪರಿಗಣಿಸಲಿಲ್ಲ. ರೋಹಿತ್ ಶರ್ಮಾ ಹೀಗೆ ಗಾಯಗೊಳ್ಳುತ್ತಿರುವುದು ಮೊದಲೇನಲ್ಲ. ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾದಾಗಲೂ ಅವರು ಗಾಯಗೊಂಡಿದ್ದರಿಂದ ಆಡಲಾಗಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ