ಅನಿಲ್ ಕುಂಬ್ಳೆ ನಿವೃತ್ತಿ ಭಾಷಣ ಕೇಳಿ ಭಾವುಕರಾಗಿದ್ದ ಸಚಿನ್ ತೆಂಡುಲ್ಕರ್

ಶುಕ್ರವಾರ, 24 ಫೆಬ್ರವರಿ 2017 (10:40 IST)
ಮುಂಬೈ: ಸಚಿನ್ ತೆಂಡುಲ್ಕರ್ ಮತ್ತು ಅನಿಲ್ ಕುಂಬ್ಳೆ ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರು. ಇವರಿಬ್ಬರು ನಿವೃತ್ತಿಯಾದಾಗ ದೇಶವೇ ಬೇಸರಗೊಂಡಿತ್ತು. ಅನಿಲ್ ಕುಂಬ್ಳೆ ನಿವೃತ್ತಿ ಸುದ್ದಿ ಕೇಳಿ ಸಚಿನ್ ತೆಂಡುಲ್ಕರ್ ತೀರಾ ಭಾವುಕರಾಗಿದ್ದರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

 
ಸರಣಿಯ ಮಧ್ಯೆ ಕುಂಬ್ಳೆ ನನ್ನ ಬಳಿ ನನಗೆ ಯಾಕೋ ತಂಡಕ್ಕಾ ನೂರು ಪ್ರತಿಶತ ಕೊಡುಗೆ ನೀಡಲಾಗುತ್ತಿಲ್ಲ. ಮೊದಲಿನ ಹಾಗೆ ಬೌಲಿಂಗ್ ಮಾಡಲಾಗುತ್ತಿಲ್ಲ. ಹೀಗಾಗಿ ನಿವೃತ್ತಿಯಾಗುತ್ತೇನೆ ಎಂದಾಗ ಆಘಾತವಾಯಿತು. ನೀವು 80 ಪ್ರತಿಶತ ಕೊಡುಗೆ ಕೊಟ್ಟರೂ ಸಾಕು. ತಂಡದಲ್ಲೇ ಇರಿ ಎಂದಿದ್ದೆ. ಆದರೆ ಆಗ ತಾನೇ ಭುಜದ ಶಸ್ತ್ರ ಚಿಕಿತ್ಸೆ ಮುಗಿಸಿ ಬಂದಿದ್ದ ಕುಂಬ್ಳೆ ಪಂದ್ಯದ ನಡುವೆ ನಡು ಬೆರಳಿಗೆ ಗಾಯಮಾಡಿಕೊಂಡು 8 ಹೊಲಿಗೆ ಹಾಕಿಸಿಕೊಂಡರು.

ಅಲ್ಲಿಗೆ ಅವರ ನಿವೃತ್ತಿ ನಿರ್ಧಾರ ಗಟ್ಟಿಯಾಯಿತು. ಅವರು ನಿವೃತ್ತಿ ಭಾಷಣ ಮಾಡುತ್ತಿರಬೇಕಾದರೆ ನಾನು ತುಂಬಾ ಭಾವುಕನಾಗಿದ್ದೆ. ಅಲ್ಲಿ ವೀಕ್ಷಕರೂ ಕೂಡಾ ಎದ್ದು ನಿಂತು ಗೌರವಿಸಿದ್ದರು” ಎಂದು ಸಚಿನ್ ಸ್ಮರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ