ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ನಿವೃತ್ತಿ ಭಾರತೀಯ ಕ್ರಿಕೆಟ್ ನಲ್ಲಿ ಮರೆಯಲಾರದ ದಿನ. ಆದರೆ ತಮ್ಮ ನಿವೃತ್ತಿ ನಿರ್ಧಾರವನ್ನು ಅವರು ಪಕ್ಕಾ ಮಾಡಿದ್ದು ಹೇಗೆ? ಅವರೇ ಹೇಳಿದ್ದಾರೆ ನೋಡಿ.
“ಅಕ್ಟೋಬರ್ 2013 ರಲ್ಲಿ ನಾನು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಗೆ ತಯಾರಾಗುತ್ತಿದೆ. ನನ್ನ 24 ವರ್ಷದ ವೃತ್ತಿ ಬದುಕಿನಲ್ಲಿ ಪ್ರತಿದಿನವೂ ಜಿಮ್ ಮಾಡಿಯೇ ನನ್ನ ದಿನ ಆರಂಭವಾಗುತ್ತಿತ್ತು. ಆದರೆ ಆ ದಿನ ಬೆಳಿಗ್ಗೆ ಏಳಲೇ ಮನಸ್ಸಾಗಲಿಲ್ಲ. ಯಾಕೆ ಹೀಗಾಗುತ್ತಿದೆ. ಇಷ್ಟು ವರ್ಷ ಇಲ್ಲದ ಬೇಸರ ಇಂದ್ಯಾಕೆ? ನಾನು ಇಲ್ಲಿಗೇ ವೃತ್ತಿ ಜೀವನ ಮುಗಿಸಬೇಕೇ ಎಂಬ ಯೋಚನೆ ಬಂತು. ]
ನನ್ನ ಕ್ರಿಕೆಟ್ ಹೀರೋ ಸುನಿಲ್ ಗವಾಸ್ಕರ್ ಕೂಡಾ ಹೀಗೆಯೇ ಮಾಡಿದ್ದರಂತೆ. ಆಗಾಗ ವಾಚ್ ನೋಡಲು ಪ್ರಾರಂಭಿಸಿದ ಮೇಲೆ ಅವರು ನಿವೃತ್ತಿಯ ನಿರ್ಧಾರ ಕೈಗೊಂಡಿದ್ದರಂತೆ. ಹಾಗೆಯೇ ಇನ್ನು ನಾನೂ ನನ್ನ ಮೆಚ್ಚಿನ ಕ್ರೀಡೆಗೆ ನಿವೃತ್ತಿ ಹೇಳಬೇಕು ಎಂದು ನಿರ್ಧರಿಸಿದೆ” ಎಂದಿದ್ದಾರೆ ಸಚಿನ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.