ಲಾಕ್ ಡೌನ್ ಬಳಿಕ ಧೋನಿ ಕ್ರಿಕೆಟ್ ಗೆ ಮರಳುವ ಸೂಚನೆ ನೀಡಿದ ಪತ್ನಿ ಸಾಕ್ಷಿ

ಸೋಮವಾರ, 1 ಜೂನ್ 2020 (11:14 IST)
ರಾಂಚಿ: 2019 ರ ಏಕದಿನ ವಿಶ್ವಕಪ್ ಮುಗಿದ ಬಳಿಕ ಧೋನಿ ಮೈದಾನಕ್ಕೆ ಕಾಲಿಟ್ಟಿರಲಿಲ್ಲ. ಹೀಗಾಗಿ ಅವರ ನಿವೃತ್ತಿ ಬಗ್ಗೆ ಆಗಾಗ ಊಹಾಪೋಹಗಳು ಹಬ್ಬುತ್ತಿರುತ್ತವೆ. ಈ ನಡುವೆ ಪತ್ನಿ ಸಾಕ್ಷಿ ಧೋನಿ ಇದೆಲ್ಲಾ ಸುಳ್ಳು ಎಂದು ಇತ್ತೀಚೆಗೆ ಹೇಳಿಕೆಯನ್ನೂ ನೀಡಿದ್ದರು.


ಹಾಗಿದ್ದರೂ ಧೋನಿ ಯಾವಾಗ ಕ್ರಿಕೆಟ್ ಗೆ ಮರಳುತ್ತಾರೆ ಎಂಬುದಕ್ಕೆ ಉತ್ತರ ಸಿಕ್ಕಿರಲಿಲ್ಲ. ಇದೀಗ ಸಾಕ್ಷಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ನಡೆಸಿದ ಲೈವ್ ಚ್ಯಾಟ್ ನಲ್ಲಿ ಧೋನಿ ಕ್ರಿಕೆಟ್ ಗೆ ಯಾವಾಗ ಮರಳುತ್ತಾರೆ ಎಂದು ಸುಳಿವು ನೀಡಿದ್ದಾರೆ.

‘ಲಾಕ್ ಡೌನ್ ಬಳಿಕ ಕ್ರಿಕೆಟ್ ಗೆ ಅನುಮತಿ ಸಿಕ್ಕರೆ ಧೋನಿ ಕ್ರಿಕೆಟ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇಲ್ಲದೇ ಹೋದರೆ ನಾವು ಉತ್ತಾರಖಂಡ್ ನ ಹಿಲ್ ಸ್ಟೇಷನ್ ಗೆ ಪ್ರವಾಸ ತೆರಳಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ’ ಎಂದು ಸಾಕ್ಷಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ