ಅದು ಹೇಗೆ ಅವರಿಗೆ ಮೂರು ರನ್ ಬಿಟ್ಟುಕೊಟ್ಟೆ? ಕೊಹ್ಲಿಗೆ ಕ್ಲಾಸ್ ತೆಗೆದುಕೊಂಡಿದ್ದ ಧೋನಿ!
2012 ರ ಏಷ್ಯಾ ಕಪ್ ಕೂಟದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ಘಟನೆ ನಡೆದಿತ್ತಂತೆ. ಪಾಕಿಸ್ತಾನದ ಬ್ಯಾಟ್ಸ್ ಮನ್ ಹೊಡೆದಿದ್ದ ರನ್ ತಡೆಯಲು ವಿಫಲರಾದ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಿಸ್ ಫೀಲ್ಡ್ ಮಾಡಿ ಮೂರು ರನ್ ಬಿಟ್ಟುಕೊಟ್ಟಿದ್ದರಂತೆ.
ಈ ಮಿಸ್ ಫೀಲ್ಡ್ ಧೋನಿಯನ್ನು ಸಿಟ್ಟಿಗೆಬ್ಬಿಸಿತ್ತು. ವಾಪಸ್ ಬಾಲ್ ಎಂಎಸ್ ಬಳಿ ಎಸೆಯುವಾಗ ಅವರು ಅದು ಹೇಗೆ ನೀವಿಬ್ಬರೂ ಮೂರು ರನ್ ಸುಲಭವಾಗಿ ಬಿಟ್ಟುಕೊಟ್ಟಿರಿ ಎಂದು ಕೆಂಗಣ್ಣು ಬೀರಿದ್ದರು ಎಂದು ಕೊಹ್ಲಿ ಇನ್ ಸ್ಟಾಗ್ರಾಂ ಲೈವ್ ಚ್ಯಾಟ್ ನಲ್ಲಿ ಹೇಳಿಕೊಂಡಿದ್ದಾರೆ.