ಭಾರತ ತ್ರಿಮೂರ್ತಿ ಕ್ರಿಕೆಟಿಗರ ಟೀಕಿಸಿದ ಸಂದೀಪ್ ಪಾಟೀಲ್

ಶನಿವಾರ, 15 ಜುಲೈ 2017 (12:48 IST)
ಮುಂಬೈ: ಟೀಂ ಇಂಡಿಯಾಕ್ಕೆ ಕೋಚ್ ಆಯ್ಕೆ ಮಾಡುವ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ರನ್ನು ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಟೀಕಿಸಿದ್ದಾರೆ.


ಇವರೆಲ್ಲಾ ಮೈದಾನದಲ್ಲಿ ಕ್ರಿಕೆಟ್ ಆಡಿರಬಹುದು. ದೇಶಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ ದಿಗ್ಗಜ ಕ್ರಿಕೆಟಿಗರಿರಬಹದು. ಆದರೆ ಇವರಲ್ಲಿ ಯಾರಿಗೂ ಕೋಚ್ ಆದ ಅನುಭವವಿಲ್ಲ. ಹಾಗಿರುವಾಗ ಅವರು ಅನಿಲ್ ಕುಂಬ್ಳೆ ಜಾಗಕ್ಕೆ ಹೊಸ ಕೋಚ್ ಆಯ್ಕೆ ಮಾಡಿರುವ ರೀತಿಯೇ ಸರಿಯಿಲ್ಲ ಎಂದು ಸಂದೀಪ್ ಪಾಟೀಲ್ ಟೀಕಿಸಿದ್ದಾರೆ.

ಒಮ್ಮೆ ಕೋಚ್ ಆಯ್ಕೆ ಮಾಡಿ ಅದನ್ನು ಘೋಷಿಸುವುದಿಲ್ಲ ಎಂದು, ಮತ್ತೆ ದಿಡೀರ್ ಆಗಿ ಘೋಷಿಸಿ ಮತ್ತೆ ಗುತ್ತಿಗೆ ತಡೆ ಹಿಡಿದ ಕ್ರಿಕೆಟ್ ಸಮಿತಿಯ ಕ್ರಮವನ್ನೂ ಅವರು ಪ್ರಶ್ನಿಸಿದ್ದಾರೆ. ಅಲ್ಲದೆ ರವಿ ಶಾಸ್ತ್ರಿಯನ್ನು ಕೋಚ್ ಆಗುವಂತಹ ವ್ಯಕ್ತಿಯಲ್ಲ ಎಂದಿದ್ದಾರೆ. ಅವರು ತಂಡದ ನಿರ್ದೇಶಕರಾಗಿರಬಹುದು. ಆದರೆ ಕೋಚ್ ಆಗಲು ಯೋಗ್ಯರಲ್ಲ ಎಂದಿದ್ದಾರೆ.

ಇದನ್ನೂ ಓದಿ.. ಉಪರಾಷ್ಟ್ರಪತಿಯಾಗಲಿದ್ದಾರಾ ಎಸ್ ಎಂ ಕೃಷ್ಣ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ