ತುಂಬು ಗರ್ಭಿಣಿ ಸಾನಿಯಾ ಮಿರ್ಜಾ ಟೆನಿಸ್ ಆಡಿದ್ರು!
ಗರ್ಭಿಣಿಯಾಗಿರುವ ಸಾನಿಯಾ ಯಾವುದೇ ಟೂರ್ನಮೆಂಟ್ ನಲ್ಲಿ ಆಡದೇ ಸಂಪೂರ್ಣವಾಗಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ, ಫೋಟೋ ಶೂಟ್ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇದೀಗ ತಮ್ಮ ಮೆಚ್ಚಿನ ಟೆನಿಸ್ ಆಟದ ಮೇಲಿನ ಪ್ರೇಮ ಸಾನಿಯಾರನ್ನು ಬಿಡದಂತೆ ಮಾಡಿದೆ. ಅದಕ್ಕಾಗಿಯೇ ಹೊಸ ಫೋಟೋ ಶೂಟ್ ಒಂದನ್ನು ಟೆನಿಸ್ ಅಂಕಣದಲ್ಲಿಯೇ ಮಾಡಿದ್ದಾರೆ. ಈ ಫೋಟೋವನ್ನು ಟ್ವಿಟರ್ ನಲ್ಲಿ ಪ್ರಕಟಿಸಿರುವ ಸಾನಿಯಾ ‘ಒಬ್ಬ ಟೆನಿಸ್ ಆಟಗಾರರನ್ನು ಕೆಲವು ಕಾಲ ಅಂಕಣದಿಂದ ದೂರವಿಡಬಹುದು. ಆದರೆ ಟೆನಿಸ್ ನ್ನು ಟೆನಿಸ್ ಆಟಗಾರರಿಂದ ದೂರ ಮಾಡಲಾಗದು’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಹೊಟ್ಟೆಯಲ್ಲಿ ತಮ್ಮ ಕಂದಮ್ಮನಿಟ್ಟುಕೊಂಡೇ ಟೆನಿಸ್ ಅಂಕಣದಲ್ಲಿ ನಿಂತಿರುವ ಫೋಟೋ ಹಾಕಿದ್ದಾರೆ.