ಮುಂಬೈ: ಇತ್ತೀಚೆಗೆ ಟೀಂ ಇಂಡಿಯಾದ ಯಾವುದೇ ಯುವ ಆಟಗಾರನೂ ತನ್ನ ಯಶಸ್ಸಿನ ಹಿಂದೆ ರಾಹುಲ್ ದ್ರಾವಿಡ್ ಇದ್ದಾರೆ ಎಂದೇ ಹೇಳುವುದು ಸಾಮಾನ್ಯವಾಗಿ ಬಿಟ್ಟಿದೆ. ನಮ್ಮ ದೇಶದ ಆಟಗಾರರನ್ನು ಬಿಡಿ. ವಿದೇಶದ ಈ ಯುವ ಆಟಗಾರನೂ ಅದೇ ಮಾತು ಹೇಳುತ್ತಿದ್ದಾರೆ.
ಅಂದರೆ ದ್ರಾವಿಡ್ ಎಂತಹಾ ಆಟಗಾರ ನೋಡಿ. ಹೀಗೆ ಹೇಳಿದ್ದು, ಮೊನ್ನೆ ತಾನೇ ನಡೆದ ಅಭ್ಯಾಸ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಇಂಗ್ಲೆಂಡ್ ನ ಯುವ ಬ್ಯಾಟ್ಸ್ ಮನ್ ಸ್ಯಾಮ್ ಬಿಲ್ಲಿಂಗ್ಸ್. ಸ್ಪಿನ್ನರ್ ಗಳನ್ನು ಹೇಗೆ ಎದುರಿಸಬೇಕು, ಫೂಟ್ ವರ್ಕ್ ಹೇಗಿರಬೇಕು ಎಂದು ರಾಹುಲ್ ದ್ರಾವಿಡ್ ಅವರಿಗೆ ಐಪಿಎಲ್ ಸಂದರ್ಭದಲ್ಲಿ ಹೇಳಿಕೊಟ್ಟಿದ್ದರಂತೆ.
ಇದರಿಂದಾಗಿಯೇ ನಾನು ಭಾರತದಲ್ಲಿ ಯಶಸ್ಸು ಕಂಡೆ ಎಂದೆ ಬಿಲ್ಲಿಂಗ್ಸ್ ಹೇಳಿಕೊಂಡಿದ್ದಾರೆ. ಐಪಿಎಲ್ ನಲ್ಲಿ ದೆಹಲಿ ಡೇರ್ ಡೆವಿಲ್ಸ್ ತಂಡದ ಪರ ಆಡುವ ಸ್ಯಾಮ್ ದ್ರಾವಿಡ್ ಜತೆ ಆರು ವಾರ ತರಬೇತಿ ಪಡೆದಿದ್ದರಂತೆ. ಅವರ ಜತೆ ಪಾಠ ಹೇಳಿಸಿಕೊಂಡಿದ್ದು, ನನಗೆ ಇಲ್ಲಿ ಆಡಲು ಉಪಯೋಗವಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ನೋಡಿ, ನಮ್ಮ ದ್ರಾವಿಡ್ ಯಾರಿಗೆಲ್ಲಾ ಸ್ಪೂರ್ತಿಯಾಗುತ್ತಾರೆ..
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ