ವಿರಾಟ್ ಕೊಹ್ಲಿಗಿಂತಲೂ ಫಿಟ್ಟೆಸ್ಟ್ ಇಂಡಿಯನ್ ಕ್ರಿಕೆಟಿಗ ಯಾರು ಗೊತ್ತೇ?
ಅವರು ಬೇರಾರೂ ಅಲ್ಲ, ಕರ್ನಾಟಕ ಮೂಲದ ಕರುಣ್ ನಾಯರ್! ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಟೀಂ ಇಂಡಿಯಾ ಫಿಟ್ನೆಸ್ ಗುರು ಶಂಕರ್ ಬಸು ಪ್ರಕಾರ ನಾನೇ ತಂಡದ ಅತ್ಯಂತ ಫಿಟ್ಟೆಸ್ಟ್ ಆಟಗಾರ ಎಂದು ಕರುಣ್ ಹೇಳಿಕೊಂಡಿದ್ದಾರೆ.
ನಾನು ಶಂಕರ್ ಸರ್ ಬಳಿ ಹೆಚ್ಚು ಸಮಯ ಕಳೆಯುತ್ತೇನೆ. ಎಲ್ಲರಿಗಿಂತ ಹೆಚ್ಚು ನೆಟ್ ಸೆಷನ್ ನಲ್ಲಿ ಕಳೆಯುತ್ತೇನೆ. ತುಂಬಾ ಹೊತ್ತು ಬಾಲ್ ಎದುರಿಸುತ್ತೇನೆ, ಬ್ಯಾಟಿಂಗ್ ನಡೆಸುತ್ತೇನೆ. ಶಂಕರ್ ಸರ್ ಪ್ರಕಾರ ನಾನು ತಂಡದ ಅತ್ಯಂತ ಫಿಟ್ ಪ್ಲೇಯರ್’ ಎಂದು ಕರುಣ್ ಹೇಳಿಕೊಂಡಿದ್ದಾರೆ. ಆದರೆ ವಿಪರ್ಯಾಸ ನೋಡಿ ಕರುಣ್ ಗೆ ಆಡುವ ಬಳಗದಲ್ಲಿ ಮಾತ್ರ ಸ್ಥಾನವೇ ಸಿಗಲ್ಲ!