ಹರ್ಭಜನ್, ಯುವರಾಜ್ ಬಲವಂತವಾಗಿ ನನ್ನ ವಿರುದ್ಧ ಹೇಳಿಕೆ ನೀಡಿದರು: ಶಾಹಿದ್ ಅಫ್ರಿದಿ

ಬುಧವಾರ, 27 ಮೇ 2020 (08:53 IST)
ನವದೆಹಲಿ: ಕಾಶ್ಮೀರ ವಿವಾದದ ಬಗ್ಗೆ ಕೆದಕಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಈ ಮೊದಲು ಅಫ್ರಿದಿ ಚ್ಯಾರಿಟಿಯನ್ನು ಬೆಂಬಲಿಸಿದ್ದಕ್ಕೆ ಟೀಕೆಗೆ ಗುರಿಯಾಗಿದ್ದ ಭಾರತೀಯ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಕಾಶ್ಮೀರ ವಿಚಾರವನ್ನು ಅಫ್ರಿದಿ ಕೆದಕಿದಾಗ ತಿರುಗಿಬಿದ್ದಿದ್ದರು. ಅಫ್ರಿದಿ ವಿರುದ್ಧ ಕೆಂಡ ಕಾರಿದ್ದರು.

ಆದರೆ ಈ ಹೇಳಿಕೆ ಅವರ ಮನದಾಳದಿಂದ ಬಂದಿದ್ದಲ್ಲ ಎಂದಿದ್ದಾರೆ. ‘ನನ್ನ ಚ್ಯಾರಿಟಿಯನ್ನು ಬೆಂಬಲಿಸಿದ್ದಕ್ಕೆ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಗೆ ನಾನು ಋಣಿ. ಆದರೆ ಅವರ ನಿಜವಾದ ಸಮಸ್ಯೆ ಎಂದರೆ ಒತ್ತಡ. ಅವರು ಅಂತಹ ದೇಶದಲ್ಲಿದ್ದಾರೆ. ಇದು ಅವರಿಗೆ ಅಗತ್ಯವಾಗಿದೆ. ಹಾಗೆ ಜನರೇ ಅವರ ಮೇಲೆ ಒತ್ತಡ ಹೇರುತ್ತಾರೆ. ಇದಕ್ಕಿಂತ ಹೆಚ್ಚಿಗೆ ನಾನೇನೂ ಹೇಳಲಾರೆ’ ಎಂದು ಅಫ್ರಿದಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಮತ್ತೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ