ಕಾಶ್ಮೀರ ವಿವಾದ ಕೆಣಕುತ್ತಲೇ ಪ್ರಧಾನಿಯಾದ ಇಮ್ರಾನ್ ಹಾದಿಯಲ್ಲಿ ಶಾಹಿದ್ ಅಫ್ರಿದಿ

ಶುಕ್ರವಾರ, 22 ಮೇ 2020 (09:29 IST)
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಜನರ ಕಣ್ಣಲ್ಲಿ ಉತ್ತಮ ನಾಯಕನಾಗಬೇಕು ಎಂದರೆ ಕಾಶ‍್ಮೀರ ವಿಚಾರ ಕೆದಕಬೇಕು ಎಂದು ಅಲ್ಲಿನ ನಾಯಕರಿಗೆ ಚೆನ್ನಾಗಿ ಗೊತ್ತು. ಹಾಲಿ ಪ್ರಧಾನಿ ಇಮ್ರಾನ್ ಖಾನ್ ಕೂಡಾ ತಮ್ಮ ರಾಜಕೀಯ ಆರಂಭಿಸಿದ್ದು ಇಲ್ಲಿದಂಲೇ. ಈಗ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕೂಡಾ ಅದೇ ಹಾದಿಯಲ್ಲಿರುವಂತಿದೆ.


ಶಾಹಿದ್ ಅಫ್ರಿದಿ ಇತ್ತೀಚೆಗೆ ಕಾಶ‍್ಮೀರ ವಿವಾದ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಹಿಂದೆಯೂ ಹಲವು ಬಾರಿ ಅಫ್ರಿದಿ ಕಾಶ್ಮೀರ ವಿವಾದವನ್ನು ಕೆದಕುವ ಪ್ರಯತ್ನ ಮಾಡಿದ್ದರು.

ಇತ್ತೀಚೆಗೆ ಕೊರೋನಾದಿಂದಾಗಿ ಸಂಕಷ್ಟಕ್ಕೀಡಾದವರಿಗೆ ನೆರವಾಗುವ ಮೂಲಕ ಅಫ್ರಿದಿ ಜನರಿಗೆ ಹತ್ತಿರವಾಗುತ್ತಿದ್ದಾರೆ. ಹೀಗಾಗಿಯೇ ಮುಂದೊಂದು ದಿನ ಅವರೂ ರಾಜಕೀಯ ಪ್ರವೇಶಿಸದರೂ ಅಚ್ಚರಿಯೇನೂ ಇಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ