ಪಾಕಿಸ್ತಾನ ಕ್ರಿಕೆಟ್ ತಂಡದ ಬಗ್ಗೆ ಹೀಗೆ ಹೇಳಿದರೆ ಶೊಯೇಬ್ ಅಖ್ತರ್ ಸುಮ್ಮನಿದ್ದಾರೆಯೇ?

ಗುರುವಾರ, 12 ಜನವರಿ 2017 (13:24 IST)
ಕರಾಚಿ: ಹೇಳಿ ಕೇಳಿ ಪಾಕಿಸ್ತಾನದ ಖ್ಯಾತ ವೇಗಿ ಶೊಯೇಬ್ ಅಖ್ತರ್. ತಮ್ಮ ದೇಶದ ಕ್ರಿಕೆಟ್ ತಂಡದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಸುಮ್ಮನಿದ್ದಾರೆಯೇ? ಆಸ್ಟ್ರೇಲಿಯಾದ ಮಾಜಿ ಆಟಗಾರನಿಗೂ ಇದೇ ಗತಿಯಾಗಿದೆ.

 
ಅಷ್ಟಕ್ಕೂ ಚಾಪೆಲ್ ಏನು ಹೇಳಿದ್ದರು? ಇತ್ತೀಚೆಗೆ ಪಾಕಿಸ್ತಾನ ಆಸ್ಟ್ರೇಲಿಯಾ ನೆಲದಲ್ಲಿ ಹೀನಾಯವಾಗಿ ಟೆಸ್ಟ್ ಸರಣಿ ಸೋತಿತ್ತು. ಇದರಿಂದಾಗಿ ಇಯಾನ್ ಚಾಪೆಲ್ ಇನ್ನು ಮುಂದೆ, ಪಾಕ್ ತಂಡವನ್ನು ಆಸ್ಟ್ರೇಲಿಯಾಕ್ಕೆ ಆಹ್ವಾನಿಸಬೇಡಿ ಎಂದು ಟೀಕೆ ಮಾಡಿದ್ದರು.

ಇದು ಶೊಯೇಬ್ ಅಖ್ತರ್ ರನ್ನು ಕೆರಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಖ್ತರ್, “ಹೌದು ನಾನು ಒಪ್ಪುತ್ತೇನೆ. ಇಂಗ್ಲೆಂಡ್ ಇದುವರೆಗೆ ವಿಶ್ವಕಪ್ ಗೆದ್ದಿಲ್ಲ. ಹಾಗಂತ ಅವರನ್ನು ವಿಶ್ವಕಪ್ ನಲ್ಲಿ ಭಾಗವಹಿಸಬೇಡಿ ಎನ್ನಲಿಕ್ಕಾಗುತ್ತಾ?” ಎಂದು ಪ್ರಶ್ನಿಸಿದ್ದಾರೆ. ಚಾಪೆಲ್ ಮಿಸ್ಬಾ ಉಲ್ ಹಕ್ ನಾಯಕತ್ವವನ್ನೂ ಲೇವಡಿ ಮಾಡಿದ್ದರು. ಅಲ್ಲದೆ ಪಾಕ್ ಆಟಗಾರರ ಕಳಪೆ ಫೀಲ್ಡಿಂಗ್ ನ್ನು ಟೀಕಿಸಿದ್ದರು. ಇದಕ್ಕೆ ಶೊಯೇಬ್ ಖಾರವಾಗಿ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ