ವೈಯಕ್ತಿಕ ಕಾರಣ ನೀಡಿ ರಜೆ ಪಡೆದ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್! ಹಲವು ಗುಮಾನಿ!
ಶನಿವಾರ, 4 ಮೇ 2019 (08:12 IST)
ಇಸ್ಲಾಮಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ, ಪಾಕಿಸ್ತಾನ ಕ್ರಿಕೆಟಿಗ ಶೊಯೇಬ್ ಮಲಿಕ್ ವೈಯಕ್ತಿಕ ಕಾರಣ ನೀಡಿ ಕೆಲವು ದಿನ ರಜೆ ಪಡೆದಿದ್ದು ಹಲವು ಗುಮಾನಿ ಹುಟ್ಟು ಹಾಕಿದೆ.
ಶೊಯೇಬ್ ಮಲಿಕ್ ಪಾಕಿಸ್ತಾನ ಕ್ರಿಕೆಟ್ ತಂಡದಿಂದ 10 ದಿನಗಳ ರಜೆ ಪಡೆದಿದ್ದಾರೆ. ಅದೂ ವೈಯಕ್ತಿಕ ಕಾರಣಗಳಿಗಾಗಿ. ಸದ್ಯಕ್ಕೆ ಅವರು ಲಂಡನ್ ಗೆ ತೆರಳಿದ್ದಾರೆ ಎನ್ನಲಾಗಿದೆ. ವಿಶ್ವಕಪ್ ಗೆ ಕೆಲವೇ ದಿನ ಬಾಕಿಯಿದ್ದು ಇಂತಹ ಸಂದರ್ಭದಲ್ಲಿ ರಜೆ ಪಡೆಯಬೇಕಾದ ವೈಯಕ್ತಿಕ ಕಾರಣ ಶೊಯೇಬ್ ಮಲಿಕ್ ಗೆ ಎದುರಾಗಿದ್ದಾದರೂ ಏನು ಎಂದು ಊಹಾಪೋಹಗಳು ಶುರುವಾಗಿದೆ.
ಕೆಲವರಂತೂ ಸಾನಿಯಾ ಮಿರ್ಜಾ ಮತ್ತು ಶೊಯೇಬ್ ಮಲಿಕ್ ನಡುವೆ ಬಿರುಕು ಮೂಡಿರಬಹುದೇ ಎಂದೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪಾಕ್ ಕ್ರಿಕೆಟ್ ತಂಡದ ಸದಸ್ಯರಾಗಲೀ, ಕ್ರಿಕೆಟ್ ಮಂಡಳಿಯಾಗಲೀ ಈ ಬಗ್ಗೆ ಯಾವುದೇ ಹೇಳಿಕೆ ನೀಡದಿರಲು ತೀರ್ಮಾನಿಸಿದ್ದು, ಶೊಯೇಬ್ ವೈಯಕ್ತಿಕ ಜೀವನವನ್ನು ಗೌರವಿಸುವುದಾಗಿ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ