ಭಾರತದ ಮುಂದಿನ ಕೋಚ್ ಆಯ್ಕೆ ಮಾಡುವ ಜವಾಬ್ದಾರಿ ಹೊತ್ತಿರುವ ಮಾಜಿ ನಾಯಕ ಸೌರವ್ ಗಂಗೂಲಿ, 2005ರಲ್ಲಿ ಆಸ್ಟ್ರೇಲಿಯಾದ ಗ್ರೇಗ್ ಚಾಪೆಲ್ ಹೆಸರನ್ನು ಶಿಫಾರಸು ಮಾಡಿದಾಗ ಉಂಟಾದ ಪ್ರಮಾದವನ್ನು ಈಗ ಮಾಡುವುದಿಲ್ಲ ಎಂದು ಹೇಳಿದ್ದಾರೆ. ದೇಶದ ಕ್ರಿಕೆಟ್‌ನಲ್ಲಿ ಎರಡು ಪ್ರಕ್ಷುಬ್ಧ ವರ್ಷಗಳಲ್ಲಿ ಕಹಿ ಸಂಬಂಧವನ್ನು ಗಂಗೂಲಿ, ಚಾಪೆಲ್ ಹಂಚಿಕೊಂಡಿದ್ದರು.
ಕ್ರಿಕೆಟ್ ಸಲಹಾ ಸಮಿತಿ ಅದನ್ನು ಸರಿಯಾಗಿ ಮಾಡುತ್ತದೆಂದು ಅವರು ಆಶಿಸಿದರು. ಅದೃಷ್ಟವಶಾತ್ ನನಗೆ ಈ ಬಾರಿ ಸಚಿನ್, ಲಕ್ಷ್ಮಣ್ ಮತ್ತು ಅಜಯ್ ಶಿರ್ಕೆ ಮತ್ತು ಅನುರಾಗ್ ಠಾಕುರ್ ಬೆಂಬಲ ಸಿಕ್ಕಿದೆ. ಒಟ್ಟಾಗಿ ನಾವು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೇವೆ ಎಂದು ಗಂಗೂಲಿ ಹೇಳಿದರು.