ಔಟಾಗಿ ವಾಪಾಸ್ಸಾಗುತ್ತಿದ್ದ ಕೊಹ್ಲಿಗೆ ಗೇಲಿ ಮಾಡಿದ ವೀಕ್ಷಕ: ನಿಜವಾಗ್ಲೂ ಆಗಿದ್ದೇನು

Sampriya

ಶುಕ್ರವಾರ, 27 ಡಿಸೆಂಬರ್ 2024 (16:47 IST)
Photo Courtesy X
ಶುಕ್ರವಾರ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನ 2ನೇ ದಿನದಂದು ಔಟಾದ ನಂತರ ಡ್ರೆಸ್ಸಿಂಗ್ ರೂಮ್‌ಗೆ ಹಿಂತಿರುಗಿದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್, ವಿರಾಟ್ ಕೊಹ್ಲಿಯನ್ನು ಗೇಲಿ ಮಾಡಲಾಗಿದೆ. ಇದರಿಂದ ಕೋಪಗೊಂಡ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವೀಕ್ಷಕರನ್ನು ಮಾತನಾಡಿಸಲು ವಾಪಾಸ್ಸಾಗಿದ್ದಾರೆ.

ವಿರಾಟ್ ಕೊಹ್ಲಿ ಕೋಪದಲ್ಲಿ ವಾಪಾಸ್‌ ಬರುತ್ತಿರುವುದನ್ನು ನೋಡಿ ಅಧಿಕಾರಿಯೊಬ್ಬರ ಅವರ ಹತ್ತಿರ ಬಂದು ಭುಜದ ಮೇಲೆ ಕೈಯಿಟ್ಟು ಸಮಾಧಾನ ಮಾಡಿದ್ದಾರೆ.  ನಿಂದನೆಗಳನ್ನು ನಿರ್ಲಕ್ಷಿಸಿ ಮುಂದುವರೆಯುವರೆಯಿರಿ ಎಂದು ಸಮಾಧಾನ ಮಾಡಿದ್ದಾರೆ.

ಕೊಹ್ಲಿ ಮೇಲೆ ಈ ರೀತಿಯ ನಿಂದನೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದ ಯುವ ಬ್ಯಾಟರ್ ಸ್ಯಾಮ್ ಕೊನ್‌ಸ್ಟಸ್ ಅವರೊಂದಿಗೆ ವಾಗ್ವಾದ ನಡೆಸಿ ದಂಡನೆಗೆ ಒಳಗಾದ ಬಳಿಕ ಕ್ರಿಕೆಟ್ ಮೈದಾನದಲ್ಲಿ ಮತ್ತೆ ಕಹಿ ಅನುಭವ ಎದುರಾಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.  36 ರನ್ ಗಳಿಸಿದ್ದ ಕೊಹ್ಲಿ ಮಗದೊಮ್ಮೆ ಆಫ್-ಸ್ಟಂಪ್ ಆಚೆಗಿನ ಎಸೆತದಲ್ಲಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಮೊದಲ ದಿನದಾಟದಲ್ಲಿ ಸ್ಯಾಮ್ ಕೊನ್‌ಸ್ಟಸ್ ಅವರ ಭುಜಕ್ಕೆ ಕೊಹ್ಲಿ ಡಿಕ್ಕಿ ಹೊಡೆದಿದ್ದರು. ಐಸಿಸಿ ನಿಯಮಾವಳಿಯ ಲೆವೆಲ್ ಒನ್ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕೊಹ್ಲಿಗೆ ಪಂದ್ಯ ಶುಲ್ಕದ ಶೇ 20ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ಹಾಕಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ