ನಮ್ಮ ಜಮಾನಾದಲ್ಲಿ ಒಂದೇ ತಂಡಕ್ಕೆ ಇಬ್ಬರು ನಾಯಕರು ಬೇಕಿಲ್ಲ ಎಂದ ಧೋನಿ
ಶುಕ್ರವಾರ, 13 ಜನವರಿ 2017 (14:32 IST)
ಮುಂಬೈ: ನಾಯಕತ್ವ ತ್ಯಜಿಸಿದ ಮೇಲೆ ಧೋನಿ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಇಂಗ್ಲೆಂಡ್ ಏಕದಿನ ಸರಣಿಗೆ ಮೊದಲು ಮಾತನಾಡಿದ ಅವರು ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ವಿಷಯಗಳನ್ನು ಹೊರ ಹಾಕಿದ್ದಾರೆ.
ವಿಭಜಿತ ನಾಯಕತ್ವ ಈ ಜಮಾನಾಕ್ಕೆ ಸರಿ ಹೊಂದುವುದಿಲ್ಲ ಎಂದು ನನಗೆ ಗೊತ್ತಿತ್ತು. ಅಲ್ಲದೆ ನಾನು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತನಾದ ಮೇಲೆ ಇನ್ನು, ಮುಂದೆ ಸಾಗುವುದು ಉತ್ತಮ ಎನಿಸಿತು. ಹೇಗಿದ್ದರೂ ಕೊಹ್ಲಿ ಚೆನ್ನಾಗಿ ನಾಯಕತ್ವ ನಿಭಾಯಿಸುತ್ತಾರೆ.
ನನ್ನ ಕೆಲಸ ಏನಿದ್ದರೂ, ವಿಕೆಟ್ ಹಿಂದೆ ನಿಂತು, ಫೀಲ್ಡಿಂಗ್ ಜಮಾವಣೆ ಸರಿಯಾಗಿದೆಯಾ ಎಂದು ನೋಡಿಕೊಳ್ಳುವುದು. ನನ್ನಿಂದ ಸಾಧ್ಯವಿರುವ ಎಲ್ಲಾ ಸಹಾಯವನ್ನೂ ಕೊಹ್ಲಿಗೆ ನೀಡುವುದೇ ನನ್ನ ಗುರಿ ಎಂದು ಧೋನಿ ಹೇಳಿಕೊಂಡಿದ್ದಾರೆ.
ಅಲ್ಲದೆ ಸದ್ಯದ ವಿರಾಟ್ ಕೊಹ್ಲಿ ನೇತೃತ್ವದ ಪಡೆ ಎಲ್ಲಾ ಕೂಟಗಳನ್ನೂ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಎಲ್ಲಾ ಇತಿಹಾಸಗಳನ್ನು ಈ ತಂಡ ಮರಳಿ ಬರೆಯಲಿದೆ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ