ಗಂಗಾನದಿಯಲ್ಲಿ ಅಸ್ಥಿ ವಿಸರ್ಜನೆ: ಗೆಳೆಯನ ಕೊನೆಯಾಸೆ ನೆರವೇರಿಸಿದ ಸ್ವೀವ್ ವಾ

ಬುಧವಾರ, 8 ಮಾರ್ಚ್ 2017 (18:09 IST)
ಸಾವಿನ ನಂತರ ವ್ಯಕ್ತಿಯ ಅಸ್ಥಿಯನ್ನು ಗಂಗಾನದಿಯಲ್ಲಿ ವಿಸರ್ಜಿಸಿದರೆ ಆತನ ಆತ್ಮಕ್ಕೆ ಮುಕ್ಕಿ ಸಿಗುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ  ನಮ್ಮ ದೇಶದವರು ಪಾಶ್ಚಾತ್ಯ ಸಂಸ್ಕೃತಿ, ನಂಬಿಕೆಗೆ ಮಾರುಹೋದರೆ ಅಲ್ಲಿನವರು ನಮ್ಮ ಸನಾತನ ಧರ್ಮ, ಭಾರತದ ಬಗ್ಗೆ ಅಪಾರ ವಿಶ್ವಾಸವನ್ನು ಹೊಂದುತ್ತಿದ್ದಾರೆ.ವಿದೇಶಿಗರು ಹಿಂದೂ ಧರ್ಮ ಸ್ವೀಕರಿಸುವುದು ಇತ್ತೀಚಿಗೆ ಹೆಚ್ಚುತ್ತಲೇ ಇದೆ. ಅದಕ್ಕೆ ಸಾಕ್ಷಿಯಾಗಿ ಮಂಗಳವಾರ ವಾರಣಾಸಿಯಲ್ಲಿ ಕಂಡು ಬಂದ ದೃಶ್ಯವೊಂದು ಎಲ್ಲರನ್ನು ಚಕಿತಗೊಳಿಸಿತು.

ಹೌದು, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಡಿ ನಾಯಕ ಸ್ವೀವ್ ವಾ ನಿನ್ನೆ ವಾರಣಾಸಿಯಲ್ಲಿದ್ದರು. ತಮ್ಮ ಆಪ್ತ ಸ್ನೇಹಿತ ಸ್ಟಿಫನ್ ಕೊನೆಯಾಸೆಯಂತೆ ಆತನ ಅಸ್ಥಿಯನ್ನವರು ಪವಿತ್ರ ಗಂಗೆಯಲ್ಲಿ ವಿಸರ್ಜಿಸಿದರು.
 
ಆಸ್ಟ್ರೇಲಿಯಾದಿಂದ ತನ್ನ ಗೆಳೆಯನೊಂದಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸ್ಟೀವ್ ವಾ ನೇರವಾಗಿ ಕಾಶಿಯ ಮಣಿಕರ್ಣಿಕಾ ಘಾಟ್‌ಗೆ ತೆರಳಿ ದೋಣಿಯಲ್ಲಿ ನದಿಯಲ್ಲಿ ಸಾಗಿ. ಗಂಗಾ ನದಿಯಲ್ಲಿ ಅಸ್ಥಿಯನ್ನು ತೇಲಿ ಬಿಟ್ಟರು.
 
ಸ್ಟೀವ್ ವಾ ಆಪ್ತ ಸ್ನೇಹಿತ ಸ್ಟೀಫನ್ ಹಿಂದೂ ಧರ್ಮದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದು ಇಸ್ಕಾನ್ ಜತೆ ಆಳವಾದ ಸಂಬಂಧವನ್ನು ಹೊಂದಿದ್ದರು. ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ತಮ್ಮ ಕೊನೆಯಾಸೆಯನ್ನು  ಮರಣಕ್ಕೂ ಮೊದಲು ಸ್ಟೀವ್ ಜತೆ ಅವರು ಹಂಚಿಕೊಂಡಿದ್ದರು.
 
ಬಂದ ಕೆಲಸ ಪೂರ್ಣಗೊಳಿಸಿದ ಬಳಿಕ ವಾರಣಾಸಿ ಸುತ್ತಬೇಕೆಂಬ ಆಸೆ ಸ್ವೀಟ್ ಅವರಿಗೆ ಇತ್ತು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಇರುವುದರಿಂದ ಅವರು ಅಲ್ಲಿಂದ ಹಿಂತಿರುಗಿದ್ದಾರೆ.

ವೆಬ್ದುನಿಯಾವನ್ನು ಓದಿ