ನೋಲಾಸ್‌ಗೆ ಗುರಿ ಮುಟ್ಟಿದ ಸನ್ ರೈಸರ್ಸ್‌: ಗುಜರಾತ್ ಲಯನ್ಸ್‌ಗೆ ಸೋಲು

ಶುಕ್ರವಾರ, 22 ಏಪ್ರಿಲ್ 2016 (00:53 IST)
ಸತತ ಮೂರು ಜಯಗಳನ್ನು ಗಳಿಸಿದ್ದ ಗುಜರಾತ್ ಲಯನ್ಸ್ ‌ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲಪ್ಪಿದೆ. ಗುಜರಾತ್ ಲಯನ್ಸ್ ನ ಅಲ್ಪಮೊತ್ತದ 135 ರನ್ ಬೆನ್ನತ್ತಿದ  ಸನ್ ರೈಸರ್ಸ್ ಹೈದರಾಬಾದ್ ಪರ ಡೇವಿಡ್ ವಾರ್ನರ್ 74 ರನ್ ಮತ್ತು ಶಿಖರ್ ಧವನ್ 53 ರನ್ ಜತೆಯಾಟದಿಂದ ಯಾವುದೇ ವಿಕೆಟ್ ಕಳೆದುಕೊಳ್ಳದೇ  14. 5 ಓವರುಗಳಲ್ಲೇ 137 ರನ್ ಗಳಿಸಿ ಭರ್ಜರಿ ಜಯಗಳಿಸಿದೆ.

ಮೊದಲಿಗೆ ಬ್ಯಾಟಿಂಗ್  ಗುಜರಾತ್ ಲಯನ್ಸ್ ಭುವನೇಶ್ವರ್ ಕುಮಾರ್ ಅವರ ಮಾರಕ ಬೌಲಿಂಗ್ ತತ್ತರಿಸಿ ಬೇಗನೇ ವಿಕೆಟ್ ಗಳನ್ನು ಕಳೆದುಕೊಂಡಿತು. ಭುವನೇಶ್ವರ್ 4 ವಿಕೆಟ್ ಕಬಳಿಸಿ ಶ್ರೇಷ್ಟ ಬೌಲರ್ ಎನಿಸಿದರು. ಸುರೇಶ್ ರೈನಾ ಏಕಾಂಗಿ ಹೋರಾಟ ಮಾಡಿ 75 ರನ್ ಗಳಿಸಿದರು. 
ತಾಜಾಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ