ಮಾಜಿ ಕ್ರಿಕೆಟಿಗರಿಗೆ ಅವಮಾನ ಮಾಡಿದ ರವಿಶಾಸ್ತ್ರಿಗೆ ಮುಟ್ಟಿನೋಡಿಕೊಳ್ಳು ವಂತೆ ಏಟು ಕೊಟ್ಟ ಸುನಿಲ್ ಗವಾಸ್ಕರ್

ಶನಿವಾರ, 8 ಸೆಪ್ಟಂಬರ್ 2018 (09:42 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಸರಣಿ ಸೋತಿದ್ದಕ್ಕೆ ಟೀಂ ಇಂಡಿಯಾವನ್ನು ಟೀಕಿಸಿದ ಮಾಜಿ ಕ್ರಿಕೆಟಿಗರಿಗೆ ತಿರುಗೇಟು ಕೊಡುವ ಭರದಲ್ಲಿ ಅವರ ಸಾಧನೆಯನ್ನೇ ಪ್ರಶ್ನೆ ಮಾಡಿದ್ದ ಕೋಚ್ ರವಿಶಾಸ್ತ್ರಿಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಿರುಗೇಟು ಕೊಟ್ಟಿದ್ದಾರೆ.

ಕಳೆದ 10-15 ವರ್ಷದಲ್ಲಿ ದಿಗ್ಗಜರೆನಿಸಿಕೊಂಡ ಕ್ರಿಕೆಟಿಗರು ತಂಡದಲ್ಲಿದ್ದೂ ಟೀಂ ಇಂಡಿಯಾ ಮಾಡದ ಸಾಧನೆಯನ್ನು ಈ ತಂಡ ಮಾಡಿದೆ ಎಂದು ರವಿಶಾಸ್ತ್ರಿ ಕೊಚ್ಚಿಕೊಂಡಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸುನಿಲ್ ಗವಾಸ್ಕರ್ ಹಿಂದಿನ ದಾಖಲೆಯ ಅಂಕಿ ಅಂಶವನ್ನು ನೆನಪಿಸಿದ್ದಾರೆ.

ಟೀಂ ಇಂಡಿಯಾ ಇತ್ತೀಚೆಗೆ ಗೆದ್ದಿರುವುದು ಶ್ರೀಲಂಕಾ, ವೆಸ್ಟ್ ಇಂಡೀಸ್ ನಂತಹ ದುರ್ಬಲ ತಂಡಗಳ ಎದುರು. ದ.ಆಫ್ರಿಕಾ, ಇಂಗ್ಲೆಂಡ್ ನಂತಹ ಬಲಿಷ್ಠ ತಂಡಗಳ ಎದುರಲ್ಲ ಎಂದು ಗವಾಸ್ಕರ್ ಎಚ್ಚರಿಕೆ ನೀಡಿದ್ದಾರೆ.

1980 ರ ದಶಕದಲ್ಲಿ ತಂಡ ಇಂಗ್ಲೆಂಡ್, ವೆಸ್ಟ್ ಇಂಡೀಸ್ ನಲ್ಲಿ ಗೆದ್ದಿತ್ತು. ಕಳೆದ 15 ವರ್ಷದಲ್ಲಿ ಏನೂ ಸಾಧನೆ ಮಾಡಿರಲಿಲ್ಲ ಎಂಬುದು ರವಿಶಾಸ್ತ್ರಿ ಭಾವನೆಯಾಗಿರಬಹುದು. 2005 ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ  2007 ರಲ್ಲಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಗೆದ್ದಿದ್ದೆವು. ದ್ರಾವಿಡ್ ಶ್ರಮಕ್ಕೆ ಯಾವತ್ತೂ ತಕ್ಕ ಪ್ರತಿಫಲ ದೊರೆತಿಲ್ಲ’ ಎಂದು ಗವಾಸ್ಕರ್ ಹಿಂದಿನ ದಾಖಲೆಗಳನ್ನು ರವಿಶಾಸ್ತ್ರಿಗೆ ಮನದಟ್ಟು ಮಾಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ