ಚೇತರಿಸಿಕೊಂಡ ರೈನಾ

ಬುಧವಾರ, 19 ಅಕ್ಟೋಬರ್ 2016 (09:18 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಜ್ವರದ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ಧ ಮೊದಲನೇ ಏಕದಿನ ಪಂದ್ಯ ತಪ್ಪಿಸಿಕೊಂಡಿದ್ದರು.
ಇದೀಗ ಅವರು ಜ್ವರದಿಂದ ಚೇತರಿಸಿಕೊಂಡಿದ್ದು, ಅಭ್ಯಾಸಕ್ಕೆ ಇಳಿದಿದ್ದಾರೆ.

ಆದರೂ ಎರಡನೇ ಏಕದಿನ ಪಂದ್ಯದಲ್ಲಿ ಅವರು ಆಡುತ್ತಿಲ್ಲ. ಅವರು ಇನ್ನೂ ಶೇಕಡಾ ನೂರರಷ್ಟು ಫಿಟ್ ಆಗಿಲ್ಲದ ಕಾರಣ ಎರಡನೇ ಏಕದಿನ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ತಂಡದ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.

ಜ್ವರದ ಕಾರಣಕ್ಕೆ ರಣಜಿ ಟ್ರೋಫಿ ಪಂದ್ಯಾವಳಿಯಲ್ಲೂ ಉತ್ತರ ಪ್ರದೇಶ ಪರ ಅವರು ಬ್ಯಾಟ್ ಮಾಡಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ