ಪ್ಯಾರಿಸ್‌ನಲ್ಲಿ ರೈನಾ-ಪ್ರಿಯಾಂಕಾ ಪ್ರೀತಿಯ ಅಲೆ

ಶನಿವಾರ, 30 ಮೇ 2015 (11:04 IST)
ವಿಶ್ವಕಪ್ ಮುಗಿಯುತ್ತಿದ್ದಂತೆ ಬಾಲ್ಯದ ಗೆಳತಿ ಪ್ರಿಯಾಂಕಾ ಕುತ್ತಿಗೆಗೆ ತಾಳಿ ಕಟ್ಟಿದ ಕ್ರಿಕೆಟ್ ಸ್ಟಾರ್ ಸುರೇಶ್ ರೈನಾ ತಕ್ಷಣವೇ  ಐಪಿಎಲ್​ನಲ್ಲಿ ವ್ಯಸ್ತರಾಗಿ ಬಿಟ್ಟರು. ಎಪ್ರಿಲ್ ಮೊದಲ ವಾರದಲ್ಲಿ ದೆಹಲಿಯ ಪಂಚತಾರಾ ಹೊಟೆಲ್‌ನಲ್ಲಿ ವಾರದಲ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಕ್ಷಣವೇ ಐಪಿಎಲ್ ಪ್ರಾರಂಭವಾಗಿದ್ದರಿಂದ ಪ್ರಿಯಾಂಕಾ ಜತೆ ಹೆಚ್ಚಿನ ಸಮಯವನ್ನು ಕಳೆಯಲು ರೈನಾಗೆ ಸಾಧ್ಯವಾಗಿರಲಿಲ್ಲ. 

ಭರ್ಜರಿ ಪ್ರದರ್ಶನದೊಂದಿಗೆ ಐಪಿಎಲ್ ಮುಗಿಸಿರುವ ಅವರು ಜೂನ್ ತಿಂಗಳಲ್ಲಿ ಬಾಂಗ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಐಪಿಎಲ್ ಮುಕ್ತಾಯ ಮತ್ತು ಬಾಂಗ್ಲಾ ಸರಣಿಗಳ ನಡುವೆ ಅವರು 2 ವಾರಗಳ ಬಿಡುವನ್ನು ಹೊಂದಿದ್ದು  ನೂತನ ಪತ್ನಿಯೊಂದಿಗೆ ಹನಿಮೂನ್ ಆಚರಿಸಲು ಪ್ಯಾರಿಸ್‌ಗೆ ಹಾರಿದ್ದಾರೆ.
 
ಪ್ಯಾರಿಸ್​ನಲ್ಲಿ ಪತ್ನಿ ಪ್ರಿಯಾಂಕಾ ಚೌಧರಿ ಜತೆ ಮಧುರ ಮೂಡ್‌ನಲ್ಲಿ ತೇಲುತ್ತಿರುವ ಅವರು ತಮ್ಮ ಪ್ಯಾರಿಸ್ ಪ್ರಣಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.  ‘ಪ್ಯಾರಿಸ್​ನಲ್ಲಿ ಪ್ರೀತಿಯ ಅಲೆ’ ( Loving wave in Paris ❤❤❤)  ಎಂಬ ಅಡಿಬರಹದೊಂದಿಗೆ ಪತ್ನಿ ಜತೆಗೆ ಸೆಲ್ಪಿಗೆ ಪೋಸ್ ನೀಡಿರುವ ಚಿತ್ರವನ್ನು ರೈನಾ ಟ್ವಿಟರ್​ನಲ್ಲಿ ಪ್ರಕಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ