ನಿವೃತ್ತಿ ಬಳಿಕ ಜಮ್ಮು-ಕಾಶ್ಮೀರ ವಿಚಾರಕ್ಕೆ ಕೈ ಹಾಕಿರುವ ಸುರೇಶ್ ರೈನಾ

ಗುರುವಾರ, 27 ಆಗಸ್ಟ್ 2020 (11:26 IST)
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿರುವ ಕ್ರಿಕೆಟಿಗ ಸುರೇಶ್ ರೈನಾ ಈಗ ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಅಲ್ಲಿನ ಡಿಜಿಪಿಗೆ ಪತ್ರ ಬರೆದಿದ್ದಾರೆ.


ಆದರೆ ಇದು ರಾಜಕೀಯ ವಿಚಾರ ಅಲ್ಲ. ಜಮ್ಮು ಕಾಶ್ಮೀರದಲ್ಲಿ ಕ್ರಿಕೆಟ್ ಅಭಿವೃದ್ಧಿ ಮಾಡಲು ಸೌಕರ್ಯವೊದಗಿಸಿಕೊಡುವಂತೆ ರೈನಾ ಪತ್ರದಲ್ಲಿ ಮನವಿ ಮಾಡಿದ್ದಾರೆ. ಈಗ ತಾವು ನೆಲೆಸಿರುವುದು ಉತ್ತರ ಪ್ರದೇಶದಲ್ಲಾದರೂ ಮೂಲತಃ ತಮ್ಮ ಪೂರ್ವಜರು ಜಮ್ಮು-ಕಾಶ್ಮೀರದವರು. ಹೀಗಾಗಿ ಇಲ್ಲಿನ ಜನರಿಗೆ ನನ್ನ ಋಣ ತೀರಿಸಲು ಇದು ಸೂಕ್ತ ಸಮಯ. ಇಲ್ಲಿ ಕ್ರಿಕೆಟ್ ಅಭಿವೃದ್ಧಿ ಪಡಿಸಲು, ಕಣಿವೆ ರಾಜ್ಯದ ಬಡ ಆಸಕ್ತ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಆಡಲು ಬೇಕಾದ ಮೂಲ ಸೌಕರ್ಯ ಒದಗಿಸಿ. ಅದಕ್ಕೆ ಬೇಕಾದ ಸಹಾಯ ಮಾಡಲು ತಾವೂ ಸಿದ್ಧ ಎಂದಿದ್ದಾರೆ ರೈನಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ