ಇತಿಹಾಸ ನಿರ್ಮಿಸಿದ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೂಲನ್ ಗೋಸ್ವಾಮಿ

ಬುಧವಾರ, 10 ಮೇ 2017 (07:16 IST)
ನವದೆಹಲಿ: ಪುರುಷರ ಕ್ರಿಕೆಟ್ ತಂಡದ ನಡುವೆ ಆಗಾಗ ಮಹಿಳಾ ಆಟಗಾರ್ತಿಯರೂ ಸದ್ದು ಮಾಡುತ್ತಾರೆ. ಇದೀಗ ಹಿರಿಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೂಲನ್ ಗೋಸ್ವಾಮಿ ಇತಿಹಾಸ ನಿರ್ಮಿಸಿದ್ದಾರೆ.

 
ಏಕದಿನ ಪಂದ್ಯಗಳಲ್ಲಿ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಮಾಡಿದ್ದಾರೆ. 153 ಏಕದಿನ ಪಂದ್ಯಗಳಿಂದ 181 ವಿಕೆಟ್ ಕಿತ್ತ ಗೋಸ್ವಾಮಿ ಅಗ್ರ ಸ್ಥಾನ ಪಡೆದರು.

ಇದಕ್ಕೂ ಮೊದಲು ಆಸ್ಟ್ರೇಲಿಯಾದ ಕ್ಯಾಥರಿನ್ ಫಿಟ್ಸ್ ಪ್ಯಾಟ್ರಿಕ್ 109 ಪಂದ್ಯಗಳಿಂದ 180 ವಿಕೆಟ್ ಪಡೆದಿದ್ದೇ ದಾಖಲೆಯಾಗಿತ್ತು. ನಿನ್ನೆ ದ.ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭಾರತದ ಗೋಸ್ವಾಮಿ ಈ ದಾಖಲೆ ತಮ್ಮ ಹೆಸರಿಗೆ ಬರೆದುಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ