ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಕ್ರಿಕೆಟ್ ಆಟಗಾರರು ನೀಡಿದ ನಿರಾಶದಾಯಕ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ, ಈಗ ಯಾವುದೇ ಪ್ರವಾಸದಲ್ಲಿ ಯಾವುದೇ ಆಟಗಾರರು ತಮ್ಮ ಗರ್ಲ್ಫ್ರೆಂಡ್ಗಳನ್ನು ಜೊತೆಗೆ ಕರೆದುಕೊಂಡು ಬರಲು ಅನುಮತಿ ನೀಡಲಾಗುವುದಿಲ್ಲ ಎಂದು ಬಿಸಿಸಿಐ ಹೇಳಿಕೆ ನೀಡಿದೆ.
ಆಟಗಾರರು ತಮ್ಮ ಆಟದ ಮೇಲೆ ಪ್ರಭುತ್ವ ಸಾಧಿಸಲು ಇಚ್ಛಿಸುತ್ತಿದ್ದಾರೆ, ಆದರೆ ಪತ್ನಿಯರಿಂದ ಕ್ರಿಕೆಟ್ ಮೇಲೆ ಗಮನ ಹರಿಸುವುದು ಕಷ್ಟವಾಗುತ್ತಿದೆ. ಕೆಲ ಆಟಗಾರರು ಈ ಸಮಯದಲ್ಲಿ ನೆಟ್ ಪ್ರ್ಯಾಕ್ಟಿಸ್ ಅಥವಾ ಜಿಮ್ಗೆ ಹೋಗಲು ಇಚ್ಛಿಸುತ್ತಾರೆ, ಆದರೆ ಇದರ ಬದಲು ಕೆಲವು ಬಾರಿ ಪತ್ನಿಯರ ಜೊತೆಗೆ ನಗರದಲ್ಲಿ ಸುತ್ತಾಡಲು ಹೋಗುತ್ತಾರೆ ಎಂದು ಬಿಸಿಸಿಐ ತಿಳಿಸಿದೆ.