ಪುತ್ರಿಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಟೀಂ ಇಂಡಿಯಾ ನಾಯಕ ಧೋನಿ

ಭಾನುವಾರ, 5 ಏಪ್ರಿಲ್ 2015 (10:51 IST)
ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಮಗಳೊಂದಿಗೆ ಕ್ಯಾಮರಾಗಳೆದುರು ಕಾಣಿಸಿಕೊಂಡಿದ್ದಾರೆ. ವಿಶ್ವಕಪ್ ಸೆಮಿಫೈನಲ್ ಹಿನ್ನೆಲೆಯಲ್ಲಿ ವಿದೇಶದಲ್ಲಿದ್ದ ಧೋನಿ, ಪ್ರಸ್ತುತ ತಮ್ಮ ತಮ್ಮ ಮಗಳೊಂದಿಗೆ ಜಾಲಿಯಾಗಿದ್ದಾರೆ. 
 
ವಿದೇಶದಲ್ಲಿದ್ದರೂ ಕೂಡ ಪತ್ನಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಧೋನಿ, ತಮ್ಮ ಮಗಳಿಗೆ 'ಝೀವಾ' ಎಂಬ ಹೆಸರನ್ನಿಡಬೇಕೆಂದು ಪತ್ನಿಯೊಂದಿಗೆ ಚರ್ಚಿಸುತ್ತಿದ್ದಾರೆ ಎನ್ನಲಾಗಿತ್ತು. ಈ ನಡುವೆ ಸ್ವದೇಶಕ್ಕೆ ಮರಳಿದ್ದ ಧೋನಿ, ಮಗುವೊಂದನ್ನು ಎತ್ತಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಲ್ಲದೆ ಆ ಮಗುವೇ ಧೋನಿ ಮಗಳು ಎಂದು ಬಿಂಬಿತವಾಗಿತ್ತು. ಆದರೆ ಇದನ್ನರಿತು ಟ್ವೀಟ್ ಮಾಡಿದ್ದ ಧೋನಿ ಅವರ ಪತ್ನಿ ಸಾಕ್ಷಿ, ಅದು ತಮ್ಮ ಪುತ್ರಿಯಲ್ಲ ಎಂದು ಸ್ಪಷ್ಟಪಡಿಸಿದ್ದರು. 
 
ಟೀಮ್ ಇಂಡಿಯಾ ಆಟಗಾರ ಸುರೇಶ್ ರೈನಾ ವಿವಾಹ ಸಮಾರಂಭಕ್ಕೆ ಧೋನಿ ತಮ್ಮ ಪತ್ನಿ ಹಾಗೂ ಪುತ್ರಿಯೊಂದಿಗೆ ತೆರಳಿದ್ದರು. ಬಳಿಕ ಹಿಂದಿರುವಾಗ ರಾಂಚಿಯ ಬಿರ್ಸಾ ಮುಂಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಛಾಯಾಗ್ರಾಹಕರ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ದಾರೆ.

ವೆಬ್ದುನಿಯಾವನ್ನು ಓದಿ