ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಗೋಲ್ಡನ್ ಡಕ್ ಮುಜುಗರ

ಸೋಮವಾರ, 2 ಸೆಪ್ಟಂಬರ್ 2019 (08:05 IST)
ಜಮೈಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಅವಮಾನ ಎದುರಿಸಿದ್ದಾರೆ.


ಕೊಹ್ಲಿ ಈ ಮೂಲಕ ಟೆಸ್ಟ್ ಪಂದ್ಯಗಳಲ್ಲಿ ತಮ್ಮ ನಾಲ್ಕನೇ ಗೋಲ್ಡನ್ ಡಕ್ ಸಂಪಾದಿಸುವ ಮೂಲಕ ವಿಂಡೀಸ್ ಸರಣಿ ಮುಗಿಸಿದ್ದಾರೆ.

ಕೆಎಲ್ ರಾಹುಲ್ ಔಟಾದ ಬಳಿಕ ಕ್ರೀಸ್ ಗೆ ಬಂದ ಕೊಹ್ಲಿ ಎದುರಿಸಿದ ಮೊದಲ ಎಸೆತದಲ್ಲಿಯೇ ಕೆಮರ್ ರೋಚ್ ಬೌಲಿಂಗ್ ನಲ್ಲಿ ಔಟಾದರು. ಇದರಿಂದಾಗಿ ರೋಚ್ ಗೆ ಹ್ಯಾಟ್ರಿಕ್ ಸಾಧಿಸುವ  ಅವಕಾಶವಿತ್ತು. ಆದರೆ ಅಜಿಂಕ್ಯಾ ರೆಹಾನೆ ಔಟಾಗದೇ ಇದು ತಪ್ಪಿ ಹೋಯಿತು. ವಿಶೇಷವೆಂದರೆ ಸೆಪ್ಟೆಂಬರ್ 1 ರಂದು ಮೊದಲ ಎಸೆತದಲ್ಲಿಯೇ ಶೂನ್ಯ ಸಂಪಾದಿಸಿ ಔಟಾದ ವಿಶ್ವದ ಆರನೇ ಬ್ಯಾಟ್ಸ್ ಮನ್ ಎಂಬ ಮುಜುಗರದ ದಾಖಲೆಯೂ ಕೊಹ್ಲಿ ಪಾಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ