ರಾಷ್ಟ್ರಗೀತೆ ಹಾಡುವ ಬದಲು ಚುಯಿಂಗಮ್ ಜಗಿದು ವಿವಾದಕ್ಕೀಡಾದ ಟೀಂ ಇಂಡಿಯಾ ಕ್ರಿಕೆಟಿಗ

ಶುಕ್ರವಾರ, 27 ಜನವರಿ 2017 (10:33 IST)
ಕಾನ್ಪುರ: ಪ್ರತೀ ಪಂದ್ಯಕ್ಕೆ ಮೊದಲು ರಾಷ್ಟ್ರಗೀತೆ ಹಾಡಲು ಮೈದಾನದಲ್ಲಿ ಆಟಗಾರರು ನಿಲ್ಲುವುದು ಪದ್ಧತಿ. ಅದೇ ರೀತಿ ನಿನ್ನೆಯ ಟಿ-ಟ್ವೆಂಟಿ ಪಂದ್ಯದಲ್ಲೂ ಟೀಂ ಇಂಡಿಯಾ ಆಟಗಾರರು ರಾಷ್ಟ್ರಗೀತೆ ಹಾಡಲು ಸಾಲು ನಿಂತಿದ್ದರು. ಆದರೆ ಒಬ್ಬ ಆಟಗಾರ ಮಾತ್ರ ಚುಯಿಂಗ್ ಗಮ್ ತಿಂದು ವಿವಾದಕ್ಕೀಡಾಗಿದ್ದಾರೆ.

 
ಅವರು ಜಮ್ಮು ಮತ್ತು ಕಾಶ್ಮೀರ ಮೂಲದ ಯುವ ಬೌಲರ್ ಪರ್ವೇಜ್ ರಸೂಲ್. ಎಲ್ಲಾ ಆಟಗಾರರೂ ಶಿಸ್ತಿನಿಂದ ರಾಷ್ಟ್ರಗೀತೆ ಹಾಡುತ್ತಿದ್ದರೆ, ಪರ್ವೇಜ್ ಮಾತ್ರ ಚುಯಿಂಗ್ ಜಗಿಯುತ್ತಿದ್ದುದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಇದೀಗ ಟ್ವಿಟರ್ ನಲ್ಲಿ ಸಂಚಲನ ಮೂಡಿಸಿದ್ದು, ರಸೂಲ್ ಗೆ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಲಾಗುತ್ತಿದೆ.

ಇದು ರಾಷ್ಟ್ರಗೀತೆಗೆ ಕ್ರಿಕೆಟಿಗ ಮಾಡಿದ ಅಗೌರವ.  ಭಾರತೀಯ ಜೆರ್ಸಿ ತೊಡಲು ಆತುರವಿದೆ, ರಾಷ್ಟ್ರಗೀತೆ ಹಾಡುವ ವ್ಯವಧಾನವಿಲ್ಲವೇ?  ಆ ಸಂದರ್ಭದಲ್ಲೇ ರಾಷ್ಟ್ರಗೀತೆ ತಮ್ಮ ಕಿವಿಗೆ ಬೀಳಬಾರದು ಎಂದು ಚುಯಿಂಗ್ ಜಗಿಯುತ್ತಿದ್ದರೇ ಎಂದೆಲ್ಲಾ ರಸೂಲ್ ಗೆ ಅಭಿಮಾನಿಗಳು ಜಾಡಿಸುತ್ತಿದ್ದಾರೆ. ರಾಷ್ಟ್ರ ಗೀತೆ ಹಾಡದ ಈ ಆಟಗಾರನಿಗೆ ರಾಷ್ಟ್ರೀಯ ತಂಡದ ಕ್ಯಾಪ್ ತೊಡುವ ಯೋಗ್ಯತೆಯಿಲ್ಲ ಎಂದು ಕಾಮೆಂಟ್ ಗಳು ಬಂದಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ