ತವರು ತೊರೆಯುವ ಚಿಂತನೆಯಲ್ಲಿ ಟೀಂ ಇಂಡಿಯಾ ಆಟಗಾರ

ಮಂಗಳವಾರ, 7 ಮಾರ್ಚ್ 2017 (10:04 IST)
ಜಮ್ಮು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದಿಂದ ಟೀಂ ಇಂಡಿಯಾ ಪ್ರತಿನಿಧಿಸಿದ ಆಟಗಾರರು ಕಡಿಮೆ. ಹಾಗಿದ್ದರೂ, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಯಶಸ್ವಿಯಾದ ಪರ್ವೇಜ್ ರಸೂಲ್ ಈಗ ತವರು ರಾಜ್ಯವನ್ನೇ ತೊರೆಯಲು ಚಿಂತನೆ ನಡೆಸಿದ್ದಾರೆ.

 
ಕಾರಣ, ಜಮ್ಮು ಕಾಶ್ಮೀರದಲ್ಲಿ ಕ್ರಿಕೆಟ್ ಅಭ್ಯಾಸ ನಡೆಸಲು ಬೇಕಾದ ಸೌಲಭ್ಯಗಳಿಲ್ಲ. ಹೀಗಾಗಿ ತನ್ನ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂಬುದು ಕ್ರಿಕೆಟಿಗನ ಅಳಲು.  “ನಾನು ಟೀಂ ಇಂಡಿಯಾಗೆ ಆಯ್ಕೆಯಾದ ಮೇಲಾದರೂ, ಪರಿಸ್ಥಿತಿ ಸುಧಾರಿಸಬಹುದು ಎಂದುಕೊಂಡಿದ್ದೆ. ಆದರೆ ಆಗಲಿಲ್ಲ. ನಮ್ಮಲ್ಲಿ ಪ್ರತಿಭೆಗಳಿವೆ. ಆದರೆ ಅಭ್ಯಾಸ ನಡೆಸಲು ಸಾಕಷ್ಟು ನೆಟ್ ವ್ಯವಸ್ಥೆಯಿಲ್ಲ. ಹೀಗಾದರೆ ನಾನು ತವರು ತೊರೆಯಬೇಕಾಗುತ್ತದೆ” ಎಂದು ರಸೂಲ್ ಹೇಳಿಕೊಂಡಿದ್ದಾರೆ.

ಪರ್ವೇಜ್ ಐಪಿಎಲ್ ಗೆ ಆಯ್ಕೆಯಾದ ಏಕೈಕ ಜಮ್ಮು ಕ್ರಿಕೆಟಿಗ. ಇತ್ತೀಚೆಗೆ ಟೀಂ ಇಂಡಿಯಾ ಸೀಮಿತ ಓವರ್ ಪಂದ್ಯಗಳಲ್ಲೂ ಆಡಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಚ್ಯುಯಿಂಗ್ ಗಮ್ ಜಗಿದು ಸುದ್ದಿ ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ