ವಿಂಡೀಸ್ ಕ್ರಿಕೆಟಿಗನ ಮನೆಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಮೋಜು

ಮಂಗಳವಾರ, 27 ಜೂನ್ 2017 (08:18 IST)
ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರು ವಿಂಡೀಸ್ ತಾರೆ ಡ್ವಾನ್ ಬ್ರಾವೋ ಮನೆಯಲ್ಲಿ ರಿಲ್ಯಾಕ್ಸ್ ಆಗಿದ್ದಾರೆ.

 
ಬ್ರಾವೋ ಮತ್ತು ಭಾರತೀಯ ಕ್ರಿಕೆಟಿಗರಿಗೆ ಐಪಿಎಲ್ ದೆಸೆಯಿಂದಾಗಿ ಉತ್ತಮ ಗೆಳೆತನವಿದೆ. ಅದೇ ಸ್ನೇಹದ ಕಾರಣಕ್ಕೆ ವಿರಾಟ್ ಕೊಹ್ಲಿ, ಶಿಖರ್ ಧವನ್, ಅಜಿಂಕ್ಯಾ ರೆಹಾನೆ ಮುಂತಾದವರು ಬ್ರಾವೋ ಮನೆಗೆ ತೆರಳಿ ಮೋಜು ಮಾಡಿದ್ದಾರೆ.

ಈ ಫೋಟೋಗಳನ್ನು ಬಿಸಿಸಿಐ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದೆ. ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಕಾಲಿಟ್ಟ ಗಳಿಗೆಯಲ್ಲೇ ಬ್ರಾವೋ ತನ್ನ ಮೆಚ್ಚಿನ ಗೆಳೆಯ ಧೋನಿ ಹಾಗೂ ತಂಡಕ್ಕೆ ಸ್ವಾಗತ ಎಂದು ಟ್ವೀಟ್ ಮಾಡಿದ್ದರು. ಇದೀಗ ಅವರನ್ನು ತಮ್ಮ ಮನೆಗೇ ಕರೆಸಿಕೊಂಡು ಆತಿಥ್ಯ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ