ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಇನ್ನೂ ಫಿಟ್ ಆಗಿಲ್ಲವೇ? ಹೀಗೊಂದು ಪ್ರಶ್ನೆ ಕಾಡುತ್ತಿದೆ. ಗುರುವಾರ ತಂಡದ ಇತರ ಆಟಗಾರರ ಜತೆ ಕೊಹ್ಲಿ ಅಭ್ಯಾಸ ನಡೆಸಿಲ್ಲ.
ತೃತೀಯ ಟೆಸ್ಟ್ ಪಂದ್ಯದಲ್ಲಿ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಕೊಹ್ಲಿ ಎರಡು ದಿನ ಮೈದಾನಕ್ಕಿಳಿದಿರಲಿಲ್ಲ. ನಂತರ ಬ್ಯಾಟಿಂಗ್ ಮಾಡಿದರೂ ಬೇಗನೇ ಔಟಾಗಿದ್ದರು. ನಿನ್ನೆಯೂ ಭುಜಕ್ಕೆ ಪಟ್ಟಿಕೊಂಡು ನೆಟ್ ನಲ್ಲಿ ಕಾಣಿಸಿಕೊಂಡ ಕೊಹ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಲಿಲ್ಲ.
ಹೆಚ್ಚುವರಿಯಾಗಿ ಭಾರತ ತಂಡಕ್ಕೆ ಮುಂಬೈ ಬ್ಯಾಟ್ಸ್ ಮನ್ ಶ್ರೇಯಾಸ್ ಐಯರ್ ನನ್ನು ಕರೆಸಲಾಗಿದೆ. ಕೊನೆ ಕ್ಷಣದಲ್ಲಿ ಕೊಹ್ಲಿ ಫಿಟ್ ಆಗದಿದ್ದರೆ, ಶ್ರೇಯಾಸ್ ಕಣಕ್ಕಿಳಿಯಬಹುದು. ಹೀಗಾಗಿ ನಿರ್ಣಾಯಕ ಟೆಸ್ಟ್ ಪಂದ್ಯಕ್ಕೆ ಮೊದಲು ಭಾರತ ತಂಡದಲ್ಲಿ ಆತಂಕ ಛಾಯೆ ಕವಿದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ