ವಿರಾಟ್ ಕೊಹ್ಲಿಗೆ ಬುದ್ಧಿ ಕಲಿಸಲೆಂದೇ ಕೋಚ್ ಹುದ್ದೆಗೆ ಅರ್ಜಿ ಹಾಕಿದ ಟೆಕಿ

ಬುಧವಾರ, 28 ಜೂನ್ 2017 (08:33 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಹಾಕಲು ಬಿಸಿಸಿಐ ಜುಲೈ 8 ರವರೆಗೆ ಗಡುವು ವಿಧಿಸಿದೆ. ಈ ಹುದ್ದೆಗೆ ಈಗ ಸಾಮಾನ್ಯ ವ್ಯಕ್ತಿಯೊಬ್ಬ ಅರ್ಜಿ ಹಾಕಿದ್ದು ಭಾರೀ ಪ್ರಚಾರ ಪಡೆದಿದ್ದಾನೆ.

 
ಉಪೇಂದ್ರ ನಾಥ್ ಬ್ರಹ್ಮಚಾರಿ ಎಂಬ ಮೆಕ್ಯಾನಿಕಲ್ ಇಂಜಿನಿಯರ್ ಕೋಚ್ ಹುದ್ದೆಗೆ ಅರ್ಜಿ ಹಾಕಿದ್ದಾನೆ. ಆದರೆ ಈತನಿಗೆ ಕ್ರಿಕೆಟ್ ಅನುಭವವಿಲ್ಲ. ಬದಲಿಗೆ ಆತ ಅರ್ಜಿ ಹಾಕಿರುವುದು ಟೀಂ ಇಂಡಿಯಾಕ್ಕೆ ಮಾರ್ಗದರ್ಶನ ನೀಡುವ ದೃಷ್ಟಿಯಿಂದಲ್ಲ. ಬದಲಿಗೆ ‘ಅಹಂಕಾರಿ’ ವಿರಾಟ್ ಕೊಹ್ಲಿಗೆ ಬುದ್ಧಿ ಕಲಿಸಲು ಎಂದು ಆತನೇ ಹೇಳಿಕೊಂಡಿದ್ದಾನೆ.

ಅನಿಲ್ ಕುಂಬ್ಳೆಯಂತಹ ದಿಗ್ಗಜ ಕೋಚ್ ಹುದ್ದೆಗೆ ರಾಜೀನಾಮೆ ನೀಡುವಂತೆ ಮಾಡಿದ ಕೊಹ್ಲಿ ಜತೆ ಕೆಲ ಸಮಯ ಕಳೆಯಲು ಅವಕಾಶ ಕೊಡಿ. ಸ್ವಲ್ಪ ಸಮಯದ ನಂತರ ಕೊಹ್ಲಿಗೆ ಮೂಗುದಾರ ಹಾಕಿ ಸರಿದಾರಿಗೆ ತರುತ್ತೇನೆ ಎಂದು ಆತ ತನ್ನ ಅರ್ಜಿಯಲ್ಲಿ ತಿಳಿಸಿದ್ದಾನೆ. ಅಂತೂ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕಲು ಬಿಸಿಸಿಐ ತನ್ನ ವೆಬ್ ಸೈಟ್ ನಲ್ಲಿ ನೀಡಿದ್ದ ಈಮೇಲ್ ವಿಳಾಸದಿಂದ ಇಷ್ಟೆಲ್ಲಾ ಕತೆ ನಡೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ