ಮಿಥಾಲಿ ರಾಜ್ ವಿವಾದದಿಂದ ಎಚ್ಚೆತ್ತ ತೆಲಂಗಾಣ ಸರ್ಕಾರ

ಶನಿವಾರ, 29 ಜುಲೈ 2017 (11:13 IST)
ಹೈದರಾಬಾದ್: ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡದ ಯಶಸ್ಸಿನ ರೂವಾರಿಯಾಗಿದ್ದ ನಾಯಕಿ ಮಿಥಾಲಿ ರಾಜ್ ಗೆ ಕನಿಷ್ಠ ಅಭಿನಂದನೆಯನ್ನೂ ತಿಳಿಸಿಲ್ಲ ಎಂಬ ವಿವಾದಕ್ಕೊಳಗಾಗಿದ್ದ ತೆಲಂಗಾಣ ಸರ್ಕಾರ ತಪ್ಪು ಸರಿಪಡಿಸಲು ಮುಂದಾಗಿದೆ.


ನಾಯಕಿ ಮಿಥಾಲಿ ರಾಜ್ ಗೆ 2005 ರಲ್ಲಿಯೇ ಕೊಡುತ್ತೇವೆಂದು ಘೋಷಿಸಿದ್ದ ನಿವೇಶನವನ್ನೇ ಇನ್ನೂ ಕೊಟ್ಟಿಲ್ಲ ಎಂದು ಸರ್ಕಾರದ ಮೇಲೆ ಆರೋಪವಿತ್ತು. ಇದೀಗ ಸಿಎಂ ಕೆ. ಚಂದ್ರಶೇಖರ್ ರಾವ್ ಮಿಥಾಲಿಗೆ 1 ಕೋಟಿ ರೂ. ನಗದು ಮತ್ತು 600 ಚದರ ಅಡಿ ನಿವೇಶನ ಘೋಷಣೆ ಮಾಡಿದ್ದಾರೆ.

ವಿಶ್ವಕಪ್ ಕೂಟದಲ್ಲಿ ಗರಿಷ್ಠ ರನ್ ಗಳಿಸಿದ್ದ ಮಿಥಾಲಿಗೆ ಅಭಿನಂದನೆ ಸಲ್ಲಿಸಿರುವ ಸಿಎಂ ನೀವು ಹೈದರಾಬಾದ್ ನ ಹೆಮ್ಮೆಯ ಪುತ್ರಿ. ದೇಶಕ್ಕೇ ಹಿರಿಮೆ ತಂದಿದ್ದೀರಿ ಎಂದು ಅಭಿನಂದಿಸಿದ್ದಾರೆ.

ಇದನ್ನೂ ಓದಿ..  ಆಪರೇಷನ್ ಕಮಲ ಭಯ: ಕರ್ನಾಟಕಕ್ಕೆ ಬಂದ ಗುಜರಾತ್ ಕೈ ಶಾಸಕರು

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ