ಟೀಂ ಇಂಡಿಯಾದಿಂದ ರವಿಚಂದ್ರನ್ ಅಶ್ವಿನ್ ಕೈಬಿಟ್ಟಿದ್ದಕ್ಕೆ ಈ ಕ್ರಿಕೆಟಿಗನಿಗೆ ಬೇಸರ

ಮಂಗಳವಾರ, 24 ಜನವರಿ 2017 (09:17 IST)
ಮುಂಬೈ: ರವಿಚಂದ್ರನ್ ಅಶ್ವಿನ್ ರನ್ನು ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ರೆಸ್ಟ್ ನೀಡಿರುವುದು ಈ ಯುವ ಕ್ರಿಕೆಟಿಗನಿಗೆ ಇಷ್ಟವಾಗಿಲ್ಲವಂತೆ. ಆತನ ಜತೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಬೇಕೆಂಬ ಕನಸು ಕನಸಾಗಿಯೇ ಉಳಿಯತಲ್ಲಾ ಎನ್ನುವುದು ಆತನ ಬೇಸರಕ್ಕೆ ಕಾರಣ.
 

ಕಿರು ಮಾದರಿಯ ಸರಣಿಗೆ ಆಯ್ಕೆಯಾದ ಜಮ್ಮು ಕಾಶ್ಮೀರದ ಸ್ಪಿನ್ನರ್ ಪರ್ವೇಜ್ ರಸೂಲ್ ಈ ಆಸೆ ಹೊತ್ತುಕೊಂಡಿದ್ದ ಕ್ರಿಕೆಟಿಗ. ಆತನೂ ಯುವ ಸ್ಪಿನ್ನರ್. ಹೆಚ್ಚು ಹಿರಿಯರೊಂದಿಗೆ ಒಡನಾಡುವ ಅವಕಾಶ ಸಿಗುವುದೇ ಇಲ್ಲ. ಹೀಗಿರುವಾಗ  ಅಪರೂಪಕ್ಕೆ ಕಣಿವೆಯ ಹುಡುಗ ತಂಡಕ್ಕೆ ಆಯ್ಕೆಯಾಗಿದ್ದಾನೆ.

ಈ ಕ್ರಿಕೆಟಿಗನಿಗೆ ಅಶ್ವಿನ್ ಎಂದರೆ ತುಂಬಾ ಇಷ್ಟ. ವಿಶ್ವದ ನಂ.1 ಬೌಲರ್ ನಿಂದ ಸಾಕಷ್ಟು ಕಲಿಯುವ ಆಸೆ ಹೊಂದಿದ್ದರು. ಆದರೆ ಇದೀಗ ಅವರು ತಂಡಕ್ಕೆ ಬರುವಾಗ ಅಶ್ವಿನ್ ಹೊರಹೋಗುವ ಕಾರಣ ಆ ಅವಕಾಶ ಮಿಸ್ ಆಗಲಿದೆ ಎನ್ನುವುದೇ ಈತನ ಕೊರಗು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ