ಇಶಾಂತ್ ಅವಳನ್ನು ತನ್ನ ಜತೆಗೆ ತಿರುಗಾಡಲು ಬರುವಂತೆ ಕರೆದಾಗ ಮುಗ್ಧೆ ಸೋದರಿ, ನನ್ನ ಬಳಿ ಬಂದು ಅನುಮತಿ ಕೇಳಿದಳು. ಇಶಾಂತ್ ಕೂಡ ಒಳ್ಳೆಯ ಹುಡುಗನಾದ್ದರಿಂದ ನಾನು ನಂಬಿ ಅನುಮತಿಸಿದೆ. ಅವರು ಈಗ ಹಸೆಮಣೆಗೆ ಏರುವುದು ನನಗೆ ಸಂತಸವಾಗಿದೆ. ಡಿಸೆಂಬರ್‌ನಲ್ಲಿ ಅವರ ಮದುವೆಯಾಗುತ್ತದೆ ಎಂದು ಆಕಾಂಕ್ಷಾ ತಿಳಿಸಿದ್ದಾರೆ.
ಅನೇಕ ಅಂತಾರಾಷ್ಟ್ರೀಯ ಅಥ್ಲೀಟ್‌ಗಳ ರೀತಿ ಇಶಾಂತ್ ಮನೆಯಲ್ಲಿ ಕಡಿಮೆ ಸಮಯ ಕಳೆಯುತ್ತಾರೆ. ಪ್ರತಿಮಾ ಎಲ್ಲವನ್ನೂ ನಿಭಾಯಿಸಲು ಸಿದ್ಧರಿದ್ದಾರೆ. ''ಮನೆಯಲ್ಲಿ ಸುಂದರ ಪತ್ನಿಯಿರುವಾಗ ಅವರು ಬೇರೆಯವರತ್ತ ಏಕೆ ಕಣ್ಣು ಹಾಯಿಸುತ್ತಾರೆ. ನಾನು ಕೂಡ ಕ್ರೀಡಾಪಟುವಾಗಿದ್ದು, ಪ್ರಯಾಣ ಮಾಡುವುದು ಆಟದ ಒಂದು ಭಾಗ ಎಂದು ಅರ್ಥವಾಗುತ್ತದೆ. ನಾನು ಇಶಾಂತ್ ಜತೆ ಹೆಚ್ಚು ಪ್ರವಾಸ ಮಾಡಲು ಆಗುವುದಿಲ್ಲ ಎನ್ನುವುದು ಅವರಿಗೂ ಗೊತ್ತು'' ಎಂದು ಪ್ರತಿಮಾ ಹೇಳಿದ್ದಾರೆ.