ಪಕ್ಕಾ ಸಸ್ಯಾಹಾರಿ ಕ್ರಿಕೆಟಿಗ ಕೇದಾರ್ ಜಾದವ್ ಗೆ ಚಿಕನ್ ತಿನಿಸಿದ ಕ್ರೆಡಿಟ್ ಇವರಿಗೆ ಸಲ್ಲಬೇಕಂತೆ!
ಗುರುವಾರ, 19 ಜನವರಿ 2017 (10:24 IST)
ನವದೆಹಲಿ: ಭಾರತ ತಂಡದಲ್ಲಿ ಸದೃಡಕಾಯ ಹೊಂದಿದ ಕ್ರಿಕೆಟಿಗರೆಲ್ಲರೂ ಮಾಂಸಾಹಾರಿಗಳಲ್ಲ. ಕೆಲವೇ ಕೆಲವು ಕ್ರಿಕೆಟಿಗರು ಪಕ್ಕಾ ಸಸ್ಯಾಹಾರಿಗಳೂ ಇದ್ದಾರೆ. ಅವರಲ್ಲಿ ಕೇದಾರ್ ಜಾದವ್ ಕೂಡಾ ಒಬ್ಬರು.
ಇಂತಿಪ್ಪಾ ಕೇದಾರ್ ಜಾದವ್ ಗೆ ಚಿಕನ್ ತಿನ್ನಲು ಅಭ್ಯಾಸ ಮಾಡಿದ ಕ್ರೆಡಿಟ್ ಅವರ ಕೋಚ್, ನಿಕಟವರ್ತಿ ಕ್ರಿಕೆಟಿಗ ಸುರೇಂದ್ರ ಬಾವೆ. ಮಹಾರಾಷ್ಟ್ರದ ಸಸ್ಯಾಹಾರಿ ಕುಟುಂಬವೊಂದರಿಂದ ಬಂದ ಜಾದವ್ ಮಾಂಸಾಹಾರದ ಪಕ್ಕವೂ ಸುಳಿಯುತ್ತಿರಲಿಲ್ಲವಂತೆ.
“ನಾನು ಎಷ್ಟೋ ಬಾರಿ ಆತನ ಬೌಲಿಂಗ್ ನಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸುತ್ತಿದೆ. ಆತನ ಆಟ ಸುಧಾರಿಸಲು ಹಲವು ಬಾರಿ ಸಲಹೆ ನೀಡಿದ್ದೆ. ಆತನಿಗೆ ನಾನು ಕೋಚ್, ಮೆಂಟರ್, ಎಲ್ಲಕ್ಕಿಂತ ಹೆಚ್ಚಾಗಿ ಹಿರಿಯ ಸಹೋದರನಿದ್ದಂತೆ. ಆದರೆ ಆ ಕ್ರೆಡಿಟ್ ಎಲ್ಲಾ ನನಗೆ ಬೇಡ. ಆದರೆ ಪಕ್ಕಾ ಸಸ್ಯಾಹಾರಿಯಾಗಿದ್ದ ಜಾದವ್ ನನ್ನು ಚಿಕನ್ ತಿನ್ನುವಂತೆ ಮಾಡಿದ ಕ್ರೆಡಿಟ್ ನನಗೇ ಸಲ್ಲಬೇಕು” ಎಂದು ಬಾವೆ ತಮಾಷೆಯಾಗಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ