ಟೀಂ ಇಂಡಿಯಾಗೆ ಹೊಸ ಉಪನಾಯಕನ ಆಗಮನ!

ಬುಧವಾರ, 24 ಮೇ 2017 (12:53 IST)
ಮುಂಬೈ: ಚಾಂಪಿಯನ್ಸ್ ಟ್ರೋಫಿ ಆಡಲಿರುವ ಭಾರತ ತಂಡದಲ್ಲಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ರೋಹಿತ್ ಶರ್ಮಾ ಉಪನಾಯಕನಾಗಲಿದ್ದಾರೆ ಎಂದು ವರದಿಯಾಗಿದೆ.

 
ಅಜಿಂಕ್ಯಾ ರೆಹಾನೆ ಸ್ಥಾನಕ್ಕೆ ರೋಹಿತ್ ಉಪನಾಯಕನಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಅಭಿಮಾನಿಗಳು ವಿರಾಟ್ ಗಿಂತ ರೋಹಿತ್ ನಾಯಕನ ಪಟ್ಟಕ್ಕೆ ಸೂಕ್ತ ಎನ್ನುತ್ತಿದ್ದಾರೆ. ಅದರ ನಡುವೆ ರೋಹಿತ್ ಉಪನಾಯಕನಾಗಲಿದ್ದಾರೆ ಎನ್ನಲಾಗಿದೆ.

ಬಿಸಿಸಿಐ ಅಧಿಕೃತವಾಗಿ ಯಾರನ್ನೂ ಉಪನಾಯಕನಾಗಿ ಘೋಷಿಸಿಲ್ಲ. ಹಾಗಿದ್ದರೂ ರೋಹಿತ್ ಈ ಸ್ಥಾನ ನಿಭಾಯಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಅತ್ತ ರೋಹಿತ್ ಕೂಡಾ ತಂಡದ ಜವಾಬ್ದಾರಿ ಹೊರಲು ತುದಿಗಾಲಲ್ಲಿ ನಿಂತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ