ಈ ಟೀಂ ಇಂಡಿಯಾ ಆಟಗಾರನಿಗೆ ಮತ್ತೆ ಧೋನಿಯೇ ನಾಯಕನಾಗಬೇಕಂತೆ!

ಸೋಮವಾರ, 4 ಸೆಪ್ಟಂಬರ್ 2017 (08:24 IST)
ಮುಂಬೈ: ಟೀಂ ಇಂಡಿಯಾ ಆಟಗಾರರಿಗೆ ಈಗಲೂ ಧೋನಿಯ ಮೇಲೆ ವಿಶೇಷ ಗೌರವ. ಅವರನ್ನು ಈಗಲೂ ನಾಯಕ ಎಂದೇ ಪರಿಗಣಿಸುತ್ತಾರೆ. ಅದೇ ರೀತಿ ಸದ್ಯಕ್ಕೆ ಟೀಂ ಇಂಡಿಯಾದಿಂದ ಹೊರಗುಳಿದಿರುವ ಸುರೇಶ್ ರೈನಾ ಕೂಡಾ ತಮ್ಮ  ಮನದಾಳದ ಬಯಕೆ ಹೊರ ಹಾಕಿದ್ದಾರೆ.

 
ಟೀಂ ಇಂಡಿಯಾದಲ್ಲಿ ಧೋನಿ ನಾಯಕರಾಗಿದ್ದಾಗ ಸ್ಥಿರವಾಗಿ ಸ್ಥಾನ ಪಡೆಯುತ್ತಿದ್ದ ಸುರೇಶ್ ರೈನಾ ಈಗ ತಂಡದೊಳಕ್ಕೆ ಮತ್ತೆ ವಾಪಸಾಗಲು ಸತತ ಪ್ರಯತ್ನ ನಡೆಸುತ್ತಿದ್ದಾರೆ.

ಟೀಂ ಇಂಡಿಯಾ ಅಲ್ಲದೆ, ಐಪಿಎಲ್ ನಲ್ಲೂ ಧೋನಿ ನಾಯಕತ್ವದಲ್ಲಿ ಆಡಿದ್ದ ರೈನಾಗೆ ಮತ್ತೆ ಅವರೇ ಆಡುವ ಆಸೆಯಂತೆ. ಆದರೆ ರಾಷ್ಟ್ರೀಯ ತಂಡದಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಮತ್ತೆ ಚೆನ್ನೈ  ಸೂಪರ್ ಕಿಂಗ್ಸ್ ನಲ್ಲಿ ಧೋನಿ ಕೈ ಕೆಳಗೆ ಆಡುವ ಕನಸು ಕಾಣುತ್ತಿದ್ದಾರೆ ರೈನಾ.

ಇದನ್ನೂ ಓದಿ.. ಟೀಂ ಇಂಡಿಯಾಗೆ ಆಯ್ಕೆಯಾಗಲು ಏನು ಮಾಡಬೇಕು ಗೊತ್ತೇ?! ಗವಾಸ್ಕರ್ ಹೇಳ್ತಾರೆ ಕೇಳಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ