ಈ ಗ್ಲೌಸ್ ಅನ್ನು ಸೆಹ್ವಾಗ್ ಅವರು ಯಾರಿಗಾಗಿ ಮಾಡಿದ್ದಾರೆ ಗೊತ್ತಾ...?

ಶನಿವಾರ, 13 ಜನವರಿ 2018 (06:34 IST)
ಮುಂಬೈ : ಟೀಂ ಇಂಡಿಯಾದ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಟೀಂ ಇಂಡಿಯಾದ ಇನ್ನೊಬ್ಬ ಆಟಗಾರರಾದ ಪಾರ್ಥಿವ್ ಪಟೇಲ್ ಅವರಿಗೆ ಕೈಗಳಿಗೆ ಬಳಸುವ ಗ್ಲೌಸ್ ಆಕಾರದ ಚಪಾತಿಯ ಫೋಟೋವೊಂದನ್ನು ಟ್ವೀಟ್ ಮಾಡಿರುವುದು ಭಾರಿ ಹಾಸ್ಯಭರಿತವಾಗಿದೆ.

 
ಕೈಗಳಿಗೆ ಬಳಸುವ ಗ್ಲೌಸ್ ಆಕಾರದ ಚಪಾತಿಯನ್ನು ತಟ್ಟೆಯೊಂದರಲ್ಲಿ ಇಟ್ಟಿರುವ ಫೋಟೋ ಹಾಕಿ ‘  ಟೆಸ್ಟ್ ಕ್ರಿಕೆಟ್ ನಡೆಯುತ್ತಿರುವ ದಕ್ಷಿಣ ಆಫ್ರಿಕಾಗೆ ಗ್ಲೌಸ್ ಕಳುಹಿಸಬೇಕೆ ಅಥವಾ ನಿನ್ನ ಬಳಿ ಇದೆಯೋ’ ಎಂದು  ಸೆಹ್ವಾಗ್ ಪಾರ್ಥಿವ್ ಪಟೇಲ್ ಅವರಿಗೆ ಟ್ವೀಟ್ ಮಾಡಿದ್ದಾರೆ.

 
ಇದಕ್ಕೆ ಪ್ರತಿಕ್ರಿಯಿಸಿದ  ಪಾರ್ಥಿವ್ ಪಟೇಲ್ ಅವರು ‘ನನ್ನ ಬಳಿ ಸರಿಯಾದ ಅಳತೆಯ ಗ್ಲೌಸ್ ಗಳು ಇದೆ. ಇದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ, ಮನೆಯಲ್ಲಿ ಯಾರಿಗಾದ್ರೂ ಉಪಯೋಗಕ್ಕೆ ಬರಬಹುದು’ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ