ಸಚಿನ್ ತೆಂಡುಲ್ಕರ್ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ದಿನವಿಂದು

ಮಂಗಳವಾರ, 15 ನವೆಂಬರ್ 2016 (13:58 IST)
ಮುಂಬೈ: ಪಾಕಿಸ್ತಾನದ ವಿರುದ್ಧ ಹಾಲುಗಲ್ಲದ ಹುಡುಗ ಮೂಗಿಗೆ ಚೆಂಡು ಬಡಿದರೂ, ವೇಗದ ಬೌಲರ್ ಗಳನ್ನು ಎದುರಿಸಿದ ಧೀರ. ಕೊನೆಗೊಂದು ದಿನ ಭಾರತೀಯ ಕ್ರಿಕೆಟ್ ನ ದೇವರೆಂದೇ ಕರೆಸಿಕೊಂಡ ಸಚಿನ್ ತೆಂಡುಲ್ಕರ್ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದುಇದೇ ದಿನ.

1989ರಂದು ಇದೇ ದಿನ ಕರಾಚಿ ಮೈದಾನದಲ್ಲಿ ಅವರು ಟೆಸ್ಟ್ ಕ್ರಿಕೆಟ್ ಕ್ಯಾಪ್ ತೊಟ್ಟಿದ್ದು.ಆಗ ಅವರು 16 ವರ್ಷದ ಹುಡುಗ. ಅಲ್ಲಿಂದ ಶುರುವಾದ ಅವರ ಕೆರಿಯರ್ 24 ವರ್ಷ ಮುಂದುವರಿಯಿತು. ಈ ನಡುವೆ ಅವರು 15,921 ರನ್ ಗಳಿಸಿದ್ದರು. 200 ಟೆಸ್ಟ್ ಆಡಿದ್ದಅವರು ದಾಖಲೆಯ 51 ಶತಕ ದಾಖಲಿಸಿದ್ದರು.

ಮೊದಲ ಟೆಸ್ಟ್ ನಲ್ಲಿ ಮೊದಲ ಬಾರಿಗೆ ಬ್ಯಾಟ್ ಹಿಡಿದಾಗ ಭಾರತ 41 ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ತೆಂಡುಲ್ಕರ್ 24 ಬಾಲ್ ಎದುರಿಸಿ 15 ರನ್ ಗಳಿಸಿದ್ದರು.

ನಂತರ ನಡೆದಿದ್ದೆಲ್ಲಾ ಇತಿಹಾಸ. ಮುಂದೊಂದು ದಿನ ಅವರು ಕ್ರಿಕೆಟ್ ಜಗತ್ತಿನ ದೇವರಾದರು. ಅವರು ನಿವೃತ್ತರಾದ ಮೇಲೆ ಅದೆಷ್ಟೋ ಮಂದಿ ಕ್ರಿಕೆಟ್ ನೋಡುವುದನ್ನೇ ಬಿಟ್ಟಿದ್ದೂ ಇದೆ. ಅವರು ಕೊನೆಯ ಟೆಸ್ಟ್ ನಲ್ಲಿ ಪ್ಯಾಡ್ ಕಟ್ಟಿಕೊಂಡು ಮೈದಾನಕ್ಕಿಳಿದ ಕ್ಷಣವನ್ನು ಕ್ಯಾಮರಾ ಕಣ್ಣಲ್ಲಿ ಸುಂದರವಾಗಿ ಸೆರೆ ಹಿಡಿದ ಛಾಯಾಚಿತ್ರಕ್ಕೆ ಪ್ರಶಸ್ತಿಯೂ ಲಭಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ