ಕೆಎಲ್ ರಾಹುಲ್ ಕಮ್ ಬ್ಯಾಕ್ ಇನ್ನು ಕಷ್ಟ ಕಷ್ಟ

ಸೋಮವಾರ, 21 ಅಕ್ಟೋಬರ್ 2019 (08:57 IST)
ಬೆಂಗಳೂರು: ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಯಶಸ್ಸು ಕಾಣುತ್ತಿದ್ದರೆ ಅತ್ತ ಕೆಎಲ್ ರಾಹುಲ್ ಎದೆಯಲ್ಲಿ ತಳಮಳ ಶುರುವಾಗಿದೆ.


ಸೀಮಿತ ಓವರ್ ಗಳಲ್ಲಿ ಅವಕಾಶ ಕಳೆದುಕೊಂಡಿದ್ದ ಕನ್ನಡಿಗ ಕೆಎಲ್ ರಾಹುಲ್ ಗೆ ಫಾರ್ಮ್ ಕೊರತೆಯಿಂದಾಗಿ ಟೆಸ್ಟ್ ತಂಡದಿಂದಲೂ ಗೇಟ್ ಪಾಸ್ ಸಿಕ್ಕಿತ್ತು. ಹಾಗಿದ್ದರೂ ದೇಶೀಯ ಪಂದ್ಯದಲ್ಲಿ ಫಾರ್ಮ್ ಸಾಬೀತುಪಡಿಸಿ ಟೆಸ್ಟ್ ತಂಡಕ್ಕೆ ಮರಳಬಹುದು ಎಂದು ಲೆಕ್ಕಾಚಾರ ಹಾಕಿದ್ದರು.

ಆದರೆ ಈಗ ರೋಹಿತ್ ಶರ್ಮಾ ರನ್ ಗುಡ್ಡೆ ಹಾಕುತ್ತಿರುವುದು ನೋಡಿದರೆ ಸದ್ಯಕ್ಕಂತೂ ಅವರಿಗೆ ಟೆಸ್ಟ್ ತಂಡವೂ ಕನಸಾಗಲಿದೆ. ರೋಹಿತ್ ಜತೆಗೆ ಇನ್ನೊಬ್ಬ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಕೂಡಾ ಉತ್ತಮ ಫಾರ್ಮ್ ಪ್ರದರ್ಶಿಸುತ್ತಿರುವುದರಿಂದ ರಾಹುಲ್ ಗೆ ಇನ್ನು ಟೀಂ ಇಂಡಿಯಾ ಬಾಗಿಲು ತೆರೆಯುವುದು ಕಷ್ಟವಾಗಬಹುದು. ಮುಂದಿನ ದಿನಗಳಲ್ಲಿ ಟೀಂ ಇಂಡಿಯಾಕ್ಕೆ ಆಯ್ಕೆಯಾದರೂ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ಸಿಗುವುದು ಕಷ್ಟವೇ ಸರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ