ಮಾಜಿ ಕ್ರಿಕೆಟಿಗ ಚೇತನ್ ಚೌಹಾನ್ ನಿಫ್ಟ್ ಚೇರ್‌ಮನ್ : ಟ್ವಿಟರಿಗರ ನಗೆಬುಗ್ಗೆ

ಶನಿವಾರ, 18 ಜೂನ್ 2016 (16:37 IST)
ವಿಚಿತ್ರ ಬೆಳವಣಿಗೆಯೊಂದರಲ್ಲಿ ಭಾರತದ ಮಾಜಿ ಕ್ರಿಕೆಟರ್ ಚೇತನ್ ಚೌಹಾನ್ ಅವರನ್ನು ಫ್ಯಾಷನ್ ಟೆಕ್ನಾಲಜಿ ರಾಷ್ಟ್ರೀಯ ಸಂಸ್ಥೆ (ಎನ್‌ಐಎಫ್‌ಟಿ) ಅಧ್ಯಕ್ಷ ಹುದ್ದೆಗೆ ಸರ್ಕಾರ ನೇಮಕ ಮಾಡಿದೆ. ಬಿಜೆಪಿಯ ಮಾಜಿ ಸಂಸದರಾದ ಚೌಹಾನ್ ಡಿಡಿಸಿಎ ಉಪಾಧ್ಯಕ್ಷರೂ ಕೂಡ ಆಗಿದ್ದಾರೆ. 
 
 ಇದರ ಜತೆಗೆ ಅವರು ಹಿರಿಯ ಬಿಸಿಸಿಐ ಪದಾಧಿಕಾರಿ ಕೂಡ ಆಗಿದ್ದು, ಕ್ರಿಕೆಟ್ ಅಕಾಡೆಮಿ ನಿರ್ವಹಿಸುತ್ತಾರೆ ಮತ್ತು ಪ್ರಿಂಟಿಂಗ್ ಪ್ರೆಸ್ ಮಾಲೀಕರೂ ಆಗಿದ್ದಾರೆ. 
 
ಇದು ಭಾರತ ಸರ್ಕಾರದ ನೇಮಕವಾಗಿದೆ. ಹೆಸರುಗಳನ್ನು ಜವಳಿ ಸಚಿವಾಲಯ ಕಳಿಸುತ್ತದೆ. ಪಕ್ಷದಲ್ಲಿರುವ ಜನರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಅವರು ಹೇಳಿದರು. 
 
ನಾನು ಅಂತಾರಾಷ್ಟ್ರೀಯ ಕ್ರೀಡಾಪಟು ಮತ್ತು ಬ್ಯಾಕಿಂಗ್ ಅನುಭವವಿರುವುದರಿಂದ ಈ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ನಾನು ಬ್ಯಾಂಕ್ ಆಫ್ ಬರೋಡಾದಲ್ಲಿ ಅಧಿಕಾರಿಯಾಗಿ 23 ವರ್ಷ ಕೆಲಸ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡರು.
 
ಆದರೆ ಒಂದೇ ಬಾರಿ ಬಹು ಉದ್ಯೋಗಗಳನ್ನು ಹೇಗೆ ನಿರ್ವಹಿಸುತ್ತೀರಿ ಎಂಬ ಪ್ರಶ್ನೆಗೆ ಅವರು ಆಸಕ್ತಿಕರ ಉತ್ತರವನ್ನು ನೀಡಿದರು.  ನಾನು ಡಿಡಿಸಿಎನಲ್ಲಿ ಶೇ. 60ರಷ್ಟು ಸಮಯ ವ್ಯಯ ಮಾಡುತ್ತೇನೆ. ನಿಫ್ಟ್‌ನಲ್ಲಿ ಶೇ. 30ರಷ್ಟು ಸಮಯ ಮತ್ತು ನನ್ನ ಬಿಸಿನೆಸ್‌ನಲ್ಲಿ ಶೇ. 30ರಷ್ಟು ಸಮಯ ಕಳೆಯುತ್ತೇನೆ ಎಂದು ಚೌಹಾನ್ ಹೇಳಿದರು.
 
ಆದರೆ ಟ್ವಿಟ್ಟರಿಗರು ಸುನಿಲ್ ಗವಾಸ್ಕರ್ ಅವರ ಮಾಜಿ ಬ್ಯಾಟಿಂಗ್ ಜತೆಗಾರರಾದ ಚೌಹಾನ್ ಪ್ಯಾಷನ್ ಟೆಕ್ನಾಲಜಿ ಅಧ್ಯಕ್ಷರಾಗಿದ್ದಕ್ಕೆ ಟ್ವಿಟರ್‌ನಲ್ಲಿ ವ್ಯಂಗ್ಯ ಮಾಡಿದ್ದಾರೆ. ಮಾಜಿ ಕ್ರಿಕೆಟ್ ಆಟಗಾರನಿಗೆ ಫ್ಯಾಷನ್ ಟೆಕ್ನಾಲಜಿ ಹುದ್ದೆ ನೀಡಿದ್ದೇಕೆಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ