ನಾನೂ ಕೊಹ್ಲಿ ಆಗಬಲ್ಲೆ ಎಂದ ಬಾಂಗ್ಲಾ ಬ್ಯಾಟ್ಸ್ ಮನ್ ಮಾನ ಕಳೆದ ಟ್ವಿಟರಿಗರು

ಬುಧವಾರ, 6 ಸೆಪ್ಟಂಬರ್ 2017 (08:43 IST)
ನವದೆಹಲಿ: ವಿರಾಟ್ ಕೊಹ್ಲಿ ಈಗ ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್. ಅವರಂತೆ ಆಗಬೇಕೆಂಬುದು ಎಲ್ಲರ ಕನಸು. ಆದರೆ ಬಾಂಗ್ಲಾ ಕ್ರಿಕೆಟಿಗನೊಬ್ಬ ನಾನು ಕೊಹ್ಲಿಯಂತೆ ಆಗಬಲ್ಲೆ ಎಂದಿದ್ದಕ್ಕೆ ಟ್ವಿಟಟಿಗರು ಮಾನ ಕಳೆದಿದ್ದಾರೆ.

 
ಇದೆಲ್ಲಾ ನಡೆದಿರುವುದು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಪರ ಅರ್ಧಶತಕ ಸಿಡಿಸಿದ್ದ ಶಬ್ಬೀರ್ ರೆಹಮಾನ್ ರನ್ನು ಆಸೀಸ್ ವೇಗಿ ಲಿಯೊನ್ ‘ಶಬ್ಬೀರ್ ಕೊಹ್ಲಿಯನ್ನು ನೆನಪಿಸುತ್ತಾರೆ’ ಎಂದಿದ್ದರು.

ಅಷ್ಟೇ ಸಾಕಾಯಿತು. ಸಂದರ್ಶಕರೊಬ್ಬರು ಲಿಯೊನ್ ಕಾಮೆಂಟ್ ಬಗ್ಗೆ ನಿಮ್ಮ ಪ್ರತಿಕ್ರಿಯೆ ಹೇಳಿ ಎಂದಾಗ ಶಬ್ಬೀರ್ ‘ನಾನೂ ಕೊಹ್ಲಿಯಂತಹ ಆಟಗಾರ ಆಗಬಲ್ಲೆ. ಎಲ್ಲವೂ ಸಾಧ್ಯ. ಆದರೆ ಯಾರ ಜೊತೆಗೋ ಹೋಲಿಸಿಕೊಳ್ಳುವುದಕ್ಕಿಂತ ತಂಡಕ್ಕಾಗಿ ಕೊಡುಗೆ ನೀಡುವುದು ಮುಖ್ಯ’ ಎಂದಿದ್ದಾರೆ.

ಇದನ್ನು ಓದಿ ಟ್ವಿಟರಿಗರು ಶಬ್ಬೀರ್ ಗೆ ಚೆನ್ನಾಗಿಯೇ ಮಂಗಳಾರತಿ ಮಾಡಿದ್ದಾರೆ. ಬಹುಶಃ ಫೋಟೋ ಎಡಿಟ್ ಮಾಡಿದರೆ ಕೊಹ್ಲಿ ಆಗಬಹುದೇನೋ ಎಂದು ಒಬ್ಬರು ಕಿಚಾಯಿಸಿದರೆ ಇನ್ನೊಬ್ಬರು ನಿದ್ದೆಯಿಂದ ಏಳೋ ಶಬ್ಬೀರ್ ಎಂದು ಕಾಲೆಳೆದಿದ್ದಾರೆ.

ಇದನ್ನೂ ಓದಿ.. ಹಾಗಲಕಾಯಿ ಜ್ಯೂಸ್ ಕುಡಿದು ಮ್ಯಾಜಿಕ್ ನೋಡಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ