ಬೆಂಗಳೂರು: ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಕೆಎಲ್ ರಾಹುಲ್ ಉತ್ತಮ ಲಹರಿಯಲ್ಲಿದ್ದರು. ಬೌಲರ್ ಗಳನ್ನು ಚೆನ್ನಾಗಿ ಬೆಂಡೆತ್ತುತ್ತಿದ್ದರು. ಆದರೆ ಬೆನ್ ಸ್ಟೋಕ್ಸ್ ಎಸೆತದಲ್ಲಿ ಬೌಲ್ಡ್ ಆದರು. ಆದರೆ ಅವರು ನಿಜವಾಗಿಯೂ ಔಟಾಗಿರಲಿಲ್ಲ.
ಬೌಲ್ಡ್ ಆದ ಮೇಲೆ ಔಟ್ ಎಂದೇ ಲೆಕ್ಕವಲ್ಲೇ ಎಂದು ಅನಿಸಬಹುದು. ಆದರೆ ಸ್ಟೋಕ್ಸ್ ಎಸೆದ ಆ ಎಸೆತ ನೋ ಬಾಲ್ ಆಗಿತ್ತು. ಇದು ಟಿವಿ ರಿಪ್ಲೇಯಲ್ಲಿ ಸ್ಪಷ್ಟವಾಗಿತ್ತು. ಆದರೆ ಸರಿಯಾಗಿ ಪರಾಮರ್ಶಿಸದೇ ಅಂಪಾಯರ್ ಅನಿಲ್ ಚೌಧರಿ ಔಟ್ ನೀಡಿದ್ದರು.
ದ್ವಿತೀಯ ಟಿ20 ಪಂದ್ಯದಲ್ಲೂ ಕೊನೆಯ ಓವರ್ ನಲ್ಲಿ ಇಂಗ್ಲೆಂಡ್ ನ ಬ್ಯಾಟ್ಸ್ ಮನ್ ಗೆ ಅಂಪಾಯರ್ ತಪ್ಪು ತೀರ್ಪು ನೀಡಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೊಮ್ಮೆ ಅಂಪಾಯರ್ ಗಳು ತಪ್ಪು ತೀರ್ಪು ನೀಡಿ ವಿವಾದಕ್ಕೆ ಕಾರಣವಾಗಿದ್ದಾರೆ. ಇದರಿಂದಾಗಿ ತವರಿನ ಮೈದಾನದಲ್ಲಿ ಮಿಂಚುವ ರಾಹುಲ್ ಕನಸೂ ಭಗ್ನವಾಗಿತ್ತು. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ಆಸೆ ಸಂಪೂರ್ಣ ಚೂರಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ